

ಪ್ರಗತಿವಾಹಿನಿ ಸುದ್ದಿ, (ಸ್ವರ್ಣವಲ್ಲೀ) ಶಿರಸಿ: ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರ ಅಪೇಕ್ಷೆ ಮತ್ತು ಆದೇಶದಂತೆ, ಜ್ಯೋತಿಷಿಗಳ ಸಲಹೆಯನ್ನು ಪಡೆದು, ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಈರಾಪುರದ ವಿದ್ವಾನ್ ನಾಗರಾಜ ಭಟ್ಟ ಇವರನ್ನು ಶ್ರೀ ಶ್ರೀಗಳವರ ಶಿಷ್ಯರನ್ನಾಗಿ ಸ್ವೀಕರಿಸಲು ನಿರ್ಧರಿಸಲಾಗಿದೆ.
25-12-2023 ರಂದು ನಡೆದ ಶ್ರೀಮಠದ ಆಡಳಿತ ಮಂಡಳಿಯ ಸಭೆಯಲ್ಲಿ ಈ ಕುರಿತು ನಿರ್ಣಯಿಸಲಾಗಿದೆ. ಶಿಷ್ಯ ಸ್ವೀಕಾರದ (ಸನ್ಯಾಸಾಶ್ರಮ ಸ್ವೀಕಾರದ) ಕಾರ್ಯಕ್ರಮಗಳು ಮಾಘ ಶುದ್ಧ ತ್ರಯೋದಶೀ, ಗುರುವಾರ ದಿನಾಂಕ 22-02-2024-ರಂದು ನಡೆಯಲಿವೆ. ಸಮಗ್ರ ಕಾರ್ಯಕ್ರಮದ ವಿವರಗಳನ್ನು ನಿರ್ಣಯವಾದ ನಂತರ ಪ್ರಕಟಿಸಲಾಗುವುದು ಎಂದು ಆಡಳಿತ ಮಂಡಳಿಯ ಅಧ್ಯಕ್ಷ ವಿ.ಎನ್.ಹೆಗಡೆ ಬೊಮ್ಮಳ್ಳಿ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ