
ಪ್ರಗತಿವಾಹಿನಿ ಸುದ್ದಿ: ಮದುವೆಯಾದ ಆರೇ ತಿಂಗಳಿಗೆ ನವವಿವಾಹಿತೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರವಾತಿಯಲ್ಲಿ ನಡೆದಿದೆ.
ಲತಾ ಆತ್ಮಹತ್ಯೆಗೆ ಶರಣಾದ ನವವಿವಾಹಿತೆ. ಭದ್ರಾವತಿಯ ಹೆಂಚಿನ ಸಿದ್ದಾಪುರ ನಿವಾಸಿಯಾಗಿರುವ ಲತಾ, ಬಿಎ, ಬಿಎಡ್ ಪದವೀಧರೆ. ಆರು ತಿಂಗಳ ಹಿಂದಷ್ಟೇ ಎಂಜಿನಿಯರ್ ಶಿಕಾರಿಪುರ ಮೂಲದ ಗುರುರಾಜ್ ಎಂಬುವವರ ಜೊತೆ ವಿವಾಹವಾಗಿತ್ತು. ಮದುವೆಯಾದ ಆರು ತಿಂಗಳೊಳಗೇ ಪತಿ ಹಾಗೂ ಅತ್ತೆ ಮನೆಯವರು ಲತಾಗೆ ಕಿರುಕುಳ, ಹಿಂಸೆ ನೀಡಲಾರಂಭಿಸಿದ್ದರಂತೆ.
ಪತಿ ಹಾಗೂ ಮನೆಯವರ ಕಿರುಕುಳ, ಹಿಂಸೆಗೆ ನೊಂದು, ಡೆತ್ ನೋಟ್ ಬರೆದಿಟ್ಟು ಲತಾ, ಭದ್ರತಾ ಬಲದಂದ ಕಾಲುವೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪ್ರಕರಣ ದಾಅಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.



