Kannada NewsLatest
ಬೆಳಗಾವಿ: ಬೀರೇಶ್ವರ ದೇವರ ವಿಗ್ರಹವನ್ನೇ ಕದ್ದೊಯ್ದ ಕಳ್ಳರು

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಐತಿಹಾಸಿಕ ಬಿರೇಶ್ವರ ದೇವಸ್ಥಾನದ ವಿಗ್ರಹವನ್ನೇ ಕಳ್ಳರು ಕದ್ದೊಯ್ದ ಘಟನೆ ಬೆಳಗಾವಿ ಜಿಲ್ಲೆ ಅಥಣಿ ತಾಲುಕಿನ ಕೊಕಟನೂರು ಗ್ರಾಮದಲ್ಲಿ ನಡೆದಿದೆ.
ಇಲ್ಲಿನ ಬೀರೇಶ್ವರ ದೇವಸ್ಥಾನದ ಕಲ್ಲಿನ ಮೂರ್ತಿಯನ್ನೇ ಕಳ್ಳರು ಹೊತ್ತುಕೊಂಡು ಹೋಗಿದ್ದಾರೆ. ನಿಧಿಗಳ್ಳರು ಅಥವಾ ವಾಮಾಚಾರ ಮಾಡುವ ಖದೀಮರು ಈ ಕೃತ್ಯವೆಸಗಿರುವ ಶಂಕೆ ವ್ಯಕ್ತವಾಗಿದೆ.
ಇಂದು ಬೆಳಿಗ್ಗೆ ಅರ್ಚಕರು ಪೂಜೆಗಾಗಿ ದೇವಸ್ಥಾನದ ಬಾಗಿಲು ತೆರೆದಾಗ ದೇವರ ವಿಗ್ರಹವೇ ನಾಪತ್ತೆಆಗಿರುವುದು ಬೆಳಕಿಗೆ ಬಂದಿದೆ. ಐಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಸ್ವಿಚ್ ಬೋರ್ಡ್ ಮೇಲೆ ಕೈಯಿಟ್ಟ ಮಗು ಕರೆಂಟ್ ಶಾಕ್ ಹೊಡೆದು ದಾರುಣ ಸಾವು




