ತುಂಬು ಗರ್ಭಿಣಿಯಾಗಿದ್ದರೂ ಕರ್ತವ್ಯ ನಿರ್ವಹಿಸುತ್ತಿರುವ ನರ್ಸ್ ಗೆ ಸಿಎಂ ಮೆಚ್ಚುಗೆ

ಪ್ರಗತಿವಾಹಿನಿ ಸುದ್ದಿ; ಶಿವಮೊಗ್ಗ: ಗರ್ಭಿಣಿಯಾಗಿದ್ದರೂ ಶಿವಮೊಗ್ಗದ ನರ್ಸ್ ಒಬ್ಬರು ಕೊರೊನಾ ಸೋಂಕಿತರ ಸೇವೆಯಲ್ಲಿ ನಿರತರಾಗಿ ಕರ್ತವ್ಯಪ್ರಜ್ಞೆ ಮೆರೆದಿದ್ದು, ನರ್ಸ್ ರೂಪಾ ಅವರ ಕಾರ್ಯಕ್ಕೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶಿವಮೊಗ್ಗದ ಗಾಜನೂರಿನ ನಿವಾಸಿ ರೂಪಾ ಈಗ 9 ತಿಂಗಳ ತುಂಬು ಗರ್ಭಿಣಿ. 60 ಕಿಮೀ ದೂರದಲ್ಲಿರುವ ತೀರ್ಥಹಳ್ಳಿಯ ಶ್ರೀ ಜಯಚಾಮರಾಜೇಂದ್ರ ತಾಲೂಕು ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಾರೆ. ಅಂದರೆ, ನಿತ್ಯವೂ 120 ಕಿಮೀ ದೂರ ಪ್ರಯಾಣಿಸಬೇಕು. ಆದರೂ ಕೂಡ ಒಂದು ದಿನವೂ ರಜೆ ತೆಗೆದುಕೊಳ್ಳದೇ ಕೆಲಸ ಮಾಡುತ್ತಾರೆ. ಕೊರೋನಾ ಸೋಂಕಿನ ಅಪಾಯವಿದ್ದರೂ ಕರ್ತವ್ಯ ನಿರ್ವಹಿಸುತ್ತಿರುವ ಈ ಮಹಿಳೆಗೆ ಕಾಯಕಪ್ರಜ್ಞೆಯನ್ನು ಸಿಎಂ ಮೆಚ್ಚಿಕೊಂಡಿದ್ಧಾರೆ.

ರೂಪಾ ಅವರಿಗೆ ದೂರವಾಣಿ ಕರೆ ಮಾಡಿದ ಮುಖ್ಯಮಂತ್ರಿಗಳು ಅಭಿನಂದನೆ ಹೇಳಿದ್ಧಾರೆ. ಜೊತೆಗೆ, ತುಂಬು ಗರ್ಭಿಣಿಯಾಗಿರುವುದರಿಂದ ಇಂದಿನಿಂದ ವಿಶ್ರಾಂತಿ ಪಡೆಯಿರಿ. ಕೆಲ ತಿಂಗಳವರೆಗೆ ರಜೆ ತೆಗೆದುಕೊಳ್ಳಿ ಎಂದು ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button