
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸಹೋದರ ಪುನೀತ್ ನನ್ನು ಕಳೆದುಕೊಂಡಿರುವುದು ಅರಗಿಸಿಕೊಳ್ಳಲು ಸಾಧ್ಯವಾಗದಷ್ಟು ನೋವಾಗಿದೆ ಅಪ್ಪು ಇಲ್ಲ ಎಂದು ಊಹಿಸಿಕೊಳ್ಳಲು ಆಗುತ್ತಿಲ್ಲ ಎಂದು ನಟ ಶಿವರಾಜ್ ಕುಮಾರ್ ಕಣ್ಣೀರಿಟ್ಟಿದ್ದಾರೆ.
ಬೆಂಗಳೂರಿನ ಸದಾಶಿವನಗರದ ನಿವಾಸದ ಬಳಿ ಮಾತನಾಡಿದ ಶಿವಣ್ಣ, ಪುನೀತ್ ನನಗಿಂತ 13 ವರ್ಷ ಚಿಕ್ಕವನು. ಆತನನ್ನು ಮುಗುವಿದ್ದಾಗಿನಿಂದ ನೋಡಿದ್ದೇನೆ. ಒಟ್ಟಿಗೆ ಬೆಳೆದವರು. ಅವನ ಅಗಲಿಕೆಯ ನೋವು ಸಹಿಸಲು ಸಾಧ್ಯವಿಲ್ಲ. ನನ್ನ ಮಗನನ್ನೇ ಕಳೆದುಕೊಂಡಷ್ಟು ನೋವಾಗುತ್ತಿದೆ ಎಂದು ಕಂಬನಿ ಮಿಡಿದರು.
ಅಪ್ಪುವನ್ನು ಕಳೆದುಕೊಂಡು ಕುಟುಂಬದ ನಾವೆಲ್ಲರೂ ಕೂಡ ನೋವಿನಲ್ಲಿದ್ದೇವೆ. ಅಭಿಮಾನಿಗಳಿಗೂ ಆಘಾತವಾಗಿದೆ. ಆದರೆ ಅಭಿಮಾನಿಗಳು ಉದ್ವೇಗಕ್ಕೊಳಗಾಗಿ ಆತ್ಮಹತ್ಯೆಯಂತಹ ಆತುರದ ನಿರ್ಧಾರ ಮಾಡಬಾರದು. ನಿಮಗೂ ಕುಟುಂಬಗಳಿವೆ ನಿಮ್ಮ ಕುಟುಂಬದವರಿಗೆ ನಿಮ್ಮ ಅಗತ್ಯವಿದೆ. ಕುಟುಂಬದ ಜವಾಬ್ದಾರಿಯ ಬಗ್ಗೆ ಗಮನಕೊಡಿ. ಎಲ್ಲವನ್ನು ಮರೆತು ಜೀವನದಲ್ಲಿ ಸಾಗಲೇಬೇಕು ಎಂದು ಮನವಿ ಮಾಡಿದರು
ಕಂಠೀರವ ಸ್ಟುಡಿಯೋ ಸುತ್ತಮುತ್ತ 144 ಸೆಕ್ಷನ್ ಜಾರಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ