Film & Entertainment

*ಸವದತ್ತಿ ಯಲ್ಲಮ್ಮನ ದರ್ಶನ ಪಡೆದ ನಟ ಶಿವರಾಜ್ ಕುಮಾರ್ ದಂಪತಿ*

ಪ್ರಗತಿವಾಹಿನಿ ಸುದ್ದಿ: ಕರುನಾಡ ಚಕ್ರವರ್ತಿ ಡಾ ಶಿವರಾಜ್ ಕುಮಾರ್ ಅವರು ಹಾಗೂ ಪತ್ನಿ ಗೀತಾ ಶಿವರಾಜ  ಕುಮಾರ್ ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ, ದೇವಿ ಆಶಿರ್ವಾದ ಪಡೆದರು. 

ಬೆಳಗಾವಿಯಲ್ಲಿ “ಉತ್ತರಕಾಂಡ” ಚಿತ್ರದ ಚಿತ್ರೀಕರಣವನ್ನು ಮುಗಿಸಿಕೊಂಡು ದೇವಿಯ ದರ್ಶನ ಪಡೆದ ಶಿವಣ್ಣನಿಗೆ ಈ ಕ್ಷೇತ್ರ ಅದೃಷ್ಟವಂತೆ. ಈ ಹಿಂದೆ ಶಿವಣ್ಣ ಅಭಿನಯದ ಶ್ರೀರಾಮ್, ಮೈಲಾರಿ ಮುಂತಾದ ಬ್ಲಾಕ್ ಬಸ್ಟರ್ ಚಿತ್ರಗಳ ಪಾಲಿಗೂ ಸವದತ್ತಿ ಎಲ್ಲಮ್ಮ ಅದೃಷ್ಟ ದೇವತೆ. ಆ ಸಿನಿಮಾಗಳು ಹಿಟ್ ಆಗಿದ್ದವು. ಹಾಗಾಗಿ ಉತ್ತರಕಾಂಡದ ಚಿತ್ರೀಕರಣದ ನಂತರ ಶಿವಣ್ಣ, ಎಲ್ಲಮ್ಮ ದೇವಿ ಆಶಿರ್ವಾದ ಪಡೆದಿದ್ದಾರೆ. 

ಕೆ.ಆರ್.ಜಿ. ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ನಿರ್ಮಿಸಿರುವ “ಉತ್ತರಕಾಂಡ” ರೋಹಿತ್ ಪದಕಿ ನಿರ್ದೇಶನದ ಬಹು ನಿರೀಕ್ಷಿತ ಆಕ್ಷನ್ ಡ್ರಾಮಾ ಚಿತ್ರವಾಗಿದೆ.

Home add -Advt

Related Articles

Back to top button