Kannada NewsKarnataka NewsLatest

ನಿಡಸೋಸಿ ಮಠದಲ್ಲಿ ಮಾ.2ರಿಂದ ಶಿವರಾತ್ರಿ ಕಾರ್ಯಕ್ರಮ

ಪ್ರಗತಿವಾಹಿನಿ ಸುದ್ದಿ, ಸಂಕೇಶ್ವರ : ಜಿಲ್ಲೆಯ ಶಕ್ತಿಪೀಠ ಎಂದೇ ಕರೆಯಲ್ಪಡುವ ನಿಡಸೋಸಿ ಗ್ರಾಮದ ಜಗದ್ಗುರು ಶ್ರೀ ದುರದುಂಡೀಶ್ವರ ಸಿದ್ಧ ಸಂಸ್ಥಾನ ಮಠದಲ್ಲಿ ಶಿವರಾತ್ರಿ ಜಾತ್ರಾ ಮಹೋತ್ಸವ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

ಮಾ.೨ರಿಂದ ೧೦ವರೆಗೆ ಶ್ರೀಮಠದ ಪೀಠಾಧಿಪತಿ ಜಗದ್ಗುರು ಪಂಚಮ ಶ್ರೀ ಶಿವಲಿಂಗೇಶ್ವರ ಮಹಾಸ್ವಾಮಿಗಳ ದಿವ್ಯಸಾನಿಧ್ಯದಲ್ಲಿ ಕಾರ್ಯಕ್ರಮ ಜರುಗಲಿದೆ.
ಮಾ.೨ರಂದು ಶರಣರ ವಚನಾಮೃತ ಬೋಧೆ ಪ್ರವಚನ ಪ್ರಾರಂಭೋತ್ಸವವಾಗಲಿದ್ದು, ಹಿಪ್ಪರಗಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರವಚನ ಕಂಠೀರವ ಶಿವರುದ್ರ ಶರಣರು ಪ್ರವಚನ ಪ್ರಾರಂಭಗೊಳ್ಳಲಿದೆ. ಶರಣರಿಗೆ ಹಿರೇಕೊಪ್ಪದ ಸಂಕಪ್ಪ ಮಾಸ್ತರ, ಸಂಗೀತ ಸೇವೆ, ಶಿರಗುಪ್ಪಿಯ ಅಪ್ಪು ಬಡಿಗೇರ ತಬಲಾ ಸಾಥಿಯಾಗಲಿದ್ದಾರೆ.

ಮಾ.೩ರಂದು ಶೇಗುಣಸಿ ವಿರಕ್ತಮಠದ ಮಹಾಂತ ದೇವರು ನೇತೃತ್ವ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಆಖಿಲ ಭಾರತ ವೀರಶೈವ ಮಹಾಸಭೆ ಜಿಲ್ಲಾಧ್ಯಕ್ಷೆ ರತ್ನಪ್ರಭಾ ಬೆಲ್ಲದ, ಸಾಹಿತಿ ಡಾ. ಗುರುದೇವಿ ಹುಲ್ಲೆಪ್ಪನವರ ಆಗಮಿಸಲಿದ್ದಾರೆ.
ಮಾ.೪ರಂದು ಹಾರನಹಳ್ಳಿ ಕೋಡಿಮಠದ ಜಗದ್ಗುರು ಡಾ. ಶಿವಾನಂಧ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಸಾನಿಧ್ಯವಹಿಸಲಿದ್ದು ಮುಖ್ಯ ಅತಿಥಿಗಳಾಗಿ  ವಿಆರ್‌ಎಲ್ ಸಮೂಹದ ಅಧ್ಯಕ್ಷ ಉದ್ಯಮಿ ಡಾ.ವಿಜಯ ಸಂಕೇಶ್ವರ ಆಗಮಿಸಲಿದ್ದಾರೆ.
ಮಾ.೫ರಂದು ಇಳಕಲ್ ವಿಜಯ ಮಹಾಂತೇಶ್ವರ ಮಠದ ಗುರು ಮಹಾಂತ ಸ್ವಾಮೀಜಿ ಸಾನಿಧ್ಯವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಮೈಸೂರ ಪತ್ರಕರ್ತ ಗಣೇಶ ಅಮೀನಗಡ, ಬೆಂಗಳೂರು ಆರ್ಕಿಟೆಕ್ಟ ಸವಿತಾ ಎನ್. ಆಗಮಿಸಲಿದ್ದಾರೆ.
ಮಾ.೬ರಂದು ಚಿಂಚಣಿ ಅಲ್ಲಮಪ್ರಭು ಸ್ವಾಮೀಜಿ ಸಾನಿಧ್ಯವಹಿಸಲಿದ್ದು, ಹುಕ್ಕೇರಿ ಕ್ಯಾರಗುಡ್ಡದ ಅಭಿನವ ಮಂಜುನಾಥ ಮಹಾರಾಜರು ನೇತೃತ್ವವಹಿಸಲಿದ್ದು, ಕೊರೋನಾ ವಾರಿಯರ‍್ಸ ಮಾಧ್ಯಮ ಹಾಗೂ ಪತ್ರಕರ್ತರ ಸತ್ಕಾರ ಜರುಗಲಿದೆ.
ಮಾ.೭ರಂದು ಶ್ರೀಮಠದ ೭ನೇ ಪೀಠಾಧಿಪತಿ ಲಿಂ. ಜಗದ್ಗುರು ಚತುರ್ಥ ನಿಜಲಿಂಗೇಶ್ವರ ಸ್ವಾಮೀಜಿ ಪುಣ್ಯಸ್ಮರಣೋತ್ಸವ ಜರುಗಲಿದ್ದು, ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಸಾನಿಧ್ಯವಹಿಸಲಿದ್ದು, ಕೊರೋನಾ ವಾರಿಯರ‍್ಸ ಪೊಲೀಸ್ ಸಿಬ್ಬಂದಿ ಸತ್ಕಾರ ಜರುಗಲಿದೆ.
ಮಾ.೮ರಂದು ಹಾವೇರಿ ನರಸಿಂಹಪುರದ ಅಂಬಿಗರ ಚೌಡಯ್ಯ ಗುರುಪೀಠದ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಸಾನಿಧ್ಯವಹಿಸಲಿದ್ದು, ಕೊರೋನಾ ವಾರಿಯರ‍್ಸ ವೈದ್ಯರು ಹಾಗೂ ಸಿಬ್ಬಂದಿ ಸತ್ಕಾರ ಜರುಗಲಿದೆ.
ಮಾ.೯ರಂದು ಬೆಳಗಾವಿ ರಾಮಕೃಷ್ಣ ಮಿಷನ್ ಸ್ವಾಮಿ ಆತ್ಮ ಪ್ರಾಣಾನಂದ ಸ್ವಾಮೀಜಿ, ಕುರಣಿ ಅಡವಿಸಿದ್ದೇಶ್ವರ ಸಂಸ್ಥಾನದ ಮಲ್ಲಿಕಾರ್ಜುನ ದೇವರು ನೇತೃತ್ವವಹಿಸಲಿದ್ದಾರೆ.
ಮಾ.೧೦ರಂದು ಪ್ರವಚನ ಮಹಾಮಂಗಲೋತ್ಸವ ಕಾರ್ಯಕ್ರಮದ ನೇತೃತ್ವವನ್ನು ಚಿಕ್ಕೋಡಿ ಸಂಪಾದನಾ ಸ್ವಾಮೀಜಿ ಹಾಗೂ ಶೇಗುಣಸಿ ಮಹಾಂತ ದೇವರು ವಹಿಸಲಿದ್ದು, ಆಶಾ ಕಾರ್ಯಕರ್ತೆಯರು, ಗ್ರಾಮ ಪಂಚಾಯತ ಸಿಬ್ಬಂದಿ, ಪುರಸಭೆ ಸಿಬ್ಬಂದಿ ಸತ್ಕಾರ ಜರುಗಲಿದೆ. ಡಾ.ಸಂಗಮೇಶ ಸವದತ್ತಿ ಅವರ ವರ್ಣನಾತ್ಮಕ ಪದಕೋಶ ದ್ವಿತೀಯ ಆವೃತ್ತಿ ಪುಸ್ಕಕ ಬಿಡುಗಡೆಗೊಳ್ಳಲಿದೆ.
ಮಾ. ೧೧ರಂದು ಸಾ.೬ ಗಂಟೆಗೆ ಬೆಳ್ಳಿ ರಥೋತ್ಸವ ಮಹಾಶಿವಯೋಗ, ಮಾ. ೧೨ರಂದು ಮ.೧೨ ಗಂಟೆಗೆ ಶ್ರೀ ದುರದುಂಡೀಶ್ವರ ಸಿದ್ಧ ಸಂಸ್ಥಾನ ಮಠದಲ್ಲಿ ಶಿವರಾತ್ರಿ ಜಾತ್ರಾ ಮಹೋತ್ಸವ ಮಹಾಪ್ರಸಾದ ಪೂಜಾ ಸಮಾರಂಭವ ಪೀಠಾಧಿಪತಿ ಜಗದ್ಗುರು ಪಂಚಮ ಶ್ರೀ ಶಿವಲಿಂಗೇಶ್ವರ ಮಹಾಸ್ವಾಮಿಗಳ ಅಮೃತ ಹಸ್ತದಿಂದ ನೆರವೇರಲಿದೆ. ಮಾ೧೩ ರಂದು ಜಂಗೀ ಕುಸ್ತಿ ಜರುಗಲಿವೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button