ಕಳಪೆ ಕಾಮಗಾರಿ: 3,88,890 ರೂ ವಸೂಲಿಗೆ ಒಂಬಡ್ಸಮನ್ ಆದೇಶ
ಪ್ರಗತಿವಾಹಿನಿ ಸುದ್ದಿ, ಖಾನಾಪುರ: ತಾಲೂಕಿನ ಘೋಟಗಾಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಪೈಕಿ ದೇವರಾಯ ಹಾಗೂ ಜಾಂಬೆಗಾಳಿ ಗ್ರಾಮದ ವಾರ್ಡ ಸದಸ್ಯರಾದ ಶ್ರೀ.ರಫೀಕ ನಜೀರ ಅಹ್ಮದ ಹಲಶೀಕರ ಇವರು ನರೇಗಾ ಯೋಜನೆಯಡಿ ದೇವರಾಯಿ ಗ್ರಾಮದಲ್ಲಿ 1. ಸಲೀಮ ಇನಾಮದಾರ ಮನೆಯಿಂದ ಮಾದರ ಇವರ ಮನೆಯವರೆಗೆ, 2.ಪಿಚಯ್ಯಾ ರಂಗಯ್ಯಾ ಬತ್ತುಲ್ಲಾ ಮನೆಯಿಂದ ಸಾಬೀರ ಮುನ್ನಾ ಇನಾಮದಾರ ಮನೆವರೆಗೆ ಎರಡು ಸಿಸಿ ರಸ್ತೆಗಳನ್ನು ದಿ.18/01/2021 ಹಾಗೂ ದಿ.19/10/2012 ರಂದು ಎಸ್ಟಿಮೇಟ್ ಇಲ್ಲದೇ ಗ್ರಾಮ ಪಂಚಾಯತಿ ಕಾಮಗಾರಿ ಆದೇಶವನ್ನು ಸಹ ಪಡೆದುಕೊಳ್ಳದೇ, ಕೇವಲ 5-7 ಜನ ಕೂಲಿ ಕಾರ್ಮಿಕರನ್ನು ನೇಮಿಸಿಕೊಂಡು ಐಜಾಕ್ಸ್ ಮಶೀನದಲ್ಲಿ 1-7 ಚೀಲ ಉಸುಕು ಮತ್ತು ಸಿಮೆಂಟ್ ಮಾತ್ರ ಬಳಸಿಕೊಂಡು ಈಗಾಗಲೇ ಇರುವ ಹಳೇ ಟಾರ ಹಾಗೂ ಸಿ.ಸಿ. ರಸ್ತೆಯ ಮೇಲೆ ಸಣ್ಣ ಪ್ರಮಾಣದ ಖಡೀಕರಣ ಮಾಡಿ ಕೇವಲ ಒಂದುವರೆ ಇಂಚ್ ಕಾಂಕ್ರಿಟ್ ಹಾಕಿ ತರಾತುರಿಯಲ್ಲಿ ನಿಯಮಬಾಹೀರವಾಗಿ ತೀರಾ ಕಳಪೆಯಾಗಿ ರಸ್ತೆ ಮಾಡಿದ್ದು ಇದ್ದು, ಕಾರ್ಮಿಕರ ಬೋಗಸ್ ಹಾಜರಿ ಹಾಕಿ, ಎನ್.ಎಮ್.ಆರ್. ಜನರೇಟ್ ಮಾಡಿದ್ದು, ಇದರಲ್ಲಿ ಭಾರಿ ಅವ್ಯವಹಾರ ನಡೆದಿರುತ್ತದೆ. ಆದ್ದರಿಂದ ನರೇಗಾ ಕಾಮಗಾರಿಯಲ್ಲಿ ನಡೆದ ಅವ್ಯವಹಾರದ ಬಗ್ಗೆ ಸಂಪೂರ್ಣ ತನಿಖೆ ಮಾಡುವಂತೆ ಕಾಂಗ್ರೆಸ್ ಮುಖಂಡ ಇರ್ಫಾನ್ ತಾಳಿಕೋಟಿ ಅವರು ಒಂಬಡ್ಸಮನ್ ಕಚೇರಿಗೆ ದೂರು ನೀಡಿದ್ದರು.
ಪ್ರಕರಣ ಸಂಪೂರ್ಣ ತನಿಖೆ ನಡೆಸಿದ ಒಂಬಡ್ಸಮನ್ ಉಪನಿರ್ದೇಶಕರಾದ ಡಾ.ಡಿ.ಎಸ್ ಹವಾಲದಾರ ನರೇಗಾ ಯೋಜನೆಯಲ್ಲಿ ಅವ್ಯವಹಾರ ನಡೆದಿದ್ದು ಸಾಬೀತಾಗಿದ್ದು ಸದರಿ ಕಾರ್ಯಾವಧಿಯಲ್ಲಿ ಕಾಮಗಾರಿಗಳ ದಾಖಲೆಗಳನ್ನ ನಿರ್ವಹಿಸುವ ಹಾಗೂ ಕಾಮಗಾರಿಗಳ ಅಕ್ರಮ ಬಿಲ್ ಪಾವತಿಸಿರುವ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳಾದ ಸಂತೋಷ ಬಳಿರಾಮ ಮಿರಾಶಿ(ಹಿಂದಿನ ಅಧ್ಯಕ್ಷರು) ಸರಸ್ವತಿ ಮಾರುತಿ ಪಾಟೀಲ್ (ಹಾಲಿ ಅಧ್ಯಕ್ಷರು), ಆನಂದ ಬಿಂಗೆ (ಹಿಂದಿನ ಪಿಡಿಓ) ನಿಂಗಪ್ಪ ಅಸ್ಕಿ( ಹಾಲಿ ಪಿಡಿಓ) ಬಸವರಾಜ ಹೊಸಮನಿ (ತಾ ಸ.ಅ)
ಸುಹಾಸ ಚೌರಿ (ಕ್ಲರ್ಕ್ ಕಂ ಡಿಓ) ಅವರಿಂದ ಒಟ್ಟು ಮೂರು ಲಕ್ಷ ಎಂಭತ್ತೆಂಟು ಸಾವಿರ ಎಂಟು ನೂರಾ ತೊಂಭತ್ತು (388890.51) ರೂಗಳನ್ನು ಸರಕಾರಕ್ಕೆ ಭರಿಸುವಂತೆ ಆದೇಶ ಹೊರಡಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ