ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಶಾರ್ಟ್ ಸರ್ಕ್ಯೂಟ್‌ನಿಂದ ರದ್ದಿ ಪೇಪರ್ ಸಂಗ್ರಹಿಸಿಟ್ಟ ಐದು ಮಳಿಗೆಗಳಿಗೆ ಬೆಂಕಿ ಹತ್ತಿಕೊಂಡು ಲಕ್ಷಾಂತರ ರೂಪಾಯಿ ಹಾನಿಯಾಗಿರುವ ಘಟನೆ ಬೆಳಗಾವಿಯ ಖಂಜರ್‌ಗಲ್ಲಿಯಲ್ಲಿ ನಡೆದಿದೆ.
ಮೊದಲೊಂದು ಮಳಿಗೆಗೆ ಬೆಂಕಿ ಹತ್ತಿ ನಂತರ ಇತರ ಅಂಗಡಿಗಳಿಗೂ ಬೆಂಕಿ ವ್ಯಾಪಿಸಿದೆ. ಬಬೂ ಇನಾಮದಾರ್, ಮೋಸಿನ್ ಇನಾಮದಾರ್, ಸಾಜೀದ್ ಇನಾಮದಾರ್ ಸೇರಿದ ಮಳಿಗೆಗಳಿಗೆ ಬೆಂಕಿ ಆವರಿಸಿಕೊಂಡಿದೆ. ಭಾರಿ ಪ್ರಮಾಣದ ಬೆಂಕಿ ಕಂಡು ಆತಂಕಕ್ಕೆ ಒಳಗಾದ ಸ್ಥಳೀಯರು ಆಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಘಟನೆಯಲ್ಲಿ ಒಂದು ಬೈಕ್, ರೇಷನ್ ಅಂಗಡಿ, ಗ್ಯಾರೇಜ್ ಅಂಗಡಿಗಳಿಗೂ ಹಾನಿಯಾಗಿದೆ. ಲಕ್ಷಾಂತರ ರೂಪಾಯಿ ಹಾನಿಯಾಗಿದ್ದರಿಂದ ಸ್ಥಳಕ್ಕೆ ಬೆಳಗಾವಿಯ ಮಾರ್ಕೆಟ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ