Kannada NewsKarnataka NewsLatest

ತನಿಖೆ ಮಾಡಲಿ, ಕ್ಷಮೆ ಕೇಳೋದು ಮಾತ್ರ ಅಲ್ಲ, ಶಾಸಕ‌ ಸ್ಥಾನಕ್ಕೂ ರಾಜೀನಾಮೆ ನೀಡುವೆ ಎಂದ ಸತೀಶ್ ಜಾರಕಿಹೊಳಿ

ನಾನು ಕ್ಷಮೆ ಕೇಳುವುದಿಲ್ಲ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: 
ಹಿಂದೂ ಶಬ್ದವನ್ನ ನಾನು ಬಳಕೆ ಮಾಡಿದ್ದೇನೆ. ಹಿಂದೂ ಶಬ್ದ ಅಶ್ಲೀಲ ಅನ್ನೋದು ಬಂದ ಬಳಿಕ ಕೆಲವರು ಎಲ್ಲೇಲ್ಲೋ ತೆಗೆದುಕೊಂಡು ಹೋಗಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌, ಮಾಜಿ ಸಿಎಂ‌ ಯಡಿಯೂರಪ್ಪ ಒಂದು‌ ತಿಂಗಳಲ್ಲಿ ತನಿಖೆ ಮಾಡಿ ವರದಿ ಕೊಡಲಿ, ಕ್ಷಮೆ ಮಾತ್ರ ಅಲ್ಲ ಶಾಸಕ‌ ಸ್ಥಾನಕ್ಕೂ ರಾಜೀನಾಮೆ ನೀಡುವೆ ಎಂದು ಶಾಸಕ ಸತೀಶ್ ಜಾರಕಿಹೊಳಿ ತಿರುಗೇಟು ನೀಡಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಹಿಂದೂ ಶಬ್ದ ಪರ್ಷಿಯನ್ ಭಾಷೆಯಿಂದ ಬಂದಿದ್ದು ಅಂತಾ ಹೇಳಿದ್ದೇನೆ. ಕೆಟ್ಟ ಶಬ್ದ ಬಳಸಿದ್ದಾರೆ ಅಂತಾ ನಾವು ಹೇಳಬೇಕಿತ್ತು ಅಶ್ಲೀಲ ಅಂದಿದ್ದನ್ನ ಹಿಡಿದುಕೊಂಡು ಕುಳಿತಿದ್ದಾರೆ. ಡಿಕ್ಷನರಿಯಲ್ಲಿ ಹಿಂದೂ ಪದದ ಅರ್ಥ ಕೆಟ್ಟ ಅಂತಾ ಇದೆ. ಅದು ಚರ್ಚೆ ಆಗಬೇಕು ಅಂತಾ ನಾನು ಹೇಳಿದ್ದೇನೆ. ವಿಕಿಪೀಡಿಯಾದಲ್ಲಿ ಇದೆ ಅಂತಾ ನಾನು ಹೇಳಿದೀನಿ ನನ್ನ ವೈಯಕ್ತಿಕ ಹೇಳಿಕೆ ಅಲ್ಲಾ ಎಂದರು.
ನನ್ನ ಹೇಳಿಕೆ ಕುರಿತು ಯಾರು ಬೇಕಾದರೂ ಚರ್ಚೆಗೆ ಬರಲಿ. ಅದರಲ್ಲಿ ನನ್ನದು ತಪ್ಪೆಂದು ಪ್ರೂವ್ ಆದರೆ ಶಾಸಕ ಸ್ಥಾನಕ್ಕೂ ರಾಜೀನಾಮೆ ಕೊಡುತ್ತೇನೆ ಎಂದರು‌.
ತಾವು ಹಿಂದೂನಾ ಅಥವಾ ಬೇರೆನಾ ಎಂಬ ಸುದ್ದಿಗಾರರ ಪ್ರಶ್ನೆಗೆ ನಾನು ಭಾರತೀಯ ಎಂದ ಸತೀಶ್ ಜಾರಕಿಹೊಳಿ, ನಾನು ಯಾರ ಪರವಾಗಿ ಇಲ್ಲಾ, ವಿರೋಧವಾಗಿಯೂ ಇಲ್ಲ. ಮನುಷ್ಯರ ಪರವಾಗಿ ಇದ್ದೇನೆ ಎಂದರು.
ರಾಜ್ಯ ಹಾಗೂ ಕೇಂದ್ರದಲ್ಲು ಅವರದ್ದೇ ಬಿಜೆಪಿ ಸರಕಾರ ಇದೆ ತನಿಖೆ ಬೇಕಾದರೂ ನಡೆಸಲಿ. ಈ ರೀತಿ ಹೊಸದೇನೂ ಅಲ್ಲಾ ಹಲವು ಬಾರಿ ನನ್ನ ಕಟ್ಟಿ ಹಾಕುವ ಪ್ರಯತ್ನ ನಡೆದಿದೆ ಅನಾವಶ್ಯಕ ಗೊಂದಲ ಸೃಷ್ಟಿ ಮಾಡಬಾರದು, ಇನ್ನೂ ಬೇಕಾದರೆ ಓದಿಕೊಳ್ಳಲಿ ಎಂದರು‌.
ಮನುವಾದಿಗಳು ನಮ್ಮನ್ನ ಸಿಕ್ಕಿ ಹಾಕಿಸುವ ಕೆಲಸ ಮಾಡುತ್ತಿದ್ದಾರೆ. ಸ್ವಾಭಾವಿಕವಾಗಿ ಹಿಂದೂ ಬಂದಾಗ ಸುರ್ಜೇವಾಲಾ ಅವರು ಖಂಡಿಸಿದ್ದಾರೆ. ನಾನು ಕ್ಷಮೆ ಕೇಳುವುದಿಲ್ಲ. ಸಿಎಂ ಅವರು ಕಮೀಟಿ ಮಾಡಿ ಬೇಕಾದರೆ  ತನಿಖೆ ಮಾಡಲಿ. ಆಗ ನಾನು ರಾಜೀನಾಮೆಗೆ ಸಿದ್ದ ಎಂದ ಸತೀಶ್ ಜಾರಕಿಹೊಳಿ ಪುನರುಚ್ಚರಿಸಿದರು.
ಯಾವುದೇ ಸಮಾಜದವರಿಗೆ ಬೈದರೂ  ಹರ್ಟ್ ಆಗುತ್ತದೆ‌. ಅಲ್ಲಿ ಹಿಂದೂ ಶಬ್ದದ ಕುರಿತು ಕೆಟ್ಟದ್ದು ಇದೆ. ಅದರ ಬಗ್ಗೆ ನಾನು ಮಾತನಾಡಿದ್ದೇನೆ. ನಿಮ್ಮ ಬಳಿ ದಾಖಲೆ ಇದ್ದರೆ ಮುಂದುವರೆಸಿ, ಇಲ್ಲ ಈ ವಿಚಾರ ಕೈ ಬಿಡಿ ಎಂದು ಚಾಟಿ ಬೀಸಿದರು.
ರಣದೀಪ್ ಸುರ್ಜೇವಾಲ  ನನ್ನ ಜತೆಗೆ ಮಾತನಾಡಿದ್ದಾರೆ. ಹಿಂದೂ ಶಬ್ದ ಬಳಸಿದ್ದಾರೆ. ರಾಷ್ಟ್ರ ಮಟ್ಟದಲ್ಲಿ ಚರ್ಚೆ ಆಗುತ್ತಿದೆ.  ಅದರ ಬಗ್ಗೆ ಸ್ಪಷ್ಟನೆ ಕೊಡಿ ಎಂದಿದ್ದಾರೆ ಎಂದರು.
ಚುನಾವಣೆಗೂ ಇದಕ್ಕೂ ಸಂಬಂಧ ಇಲ್ಲ. ಚುನಾವಣೆ ದೃಷ್ಟಿಯಿಂದ ನಾನು ಇದನ್ನು ಮಾತನಾಡಿಲ್ಲ. ಕೆಲವು ಗ್ರಂಥಗಳು ಟೈಮ್ ಪಾಸ್‌ಗಾಗಿ ಬರೆದಿದ್ದು ನಿಜ ಎಂದು ಸಮರ್ಥಿಸಿಕೊಂಡರು.
ನನ್ನ ಹೇಳಿಕೆಯ ಬಗ್ಗೆ ಅವರು ಹೊರಗಡೆ ಬಂದು ಚರ್ಚೆ ಮಾಡಲಿ. ಎಲ್ಲೋ ಕುಳಿತು ತಮಗೆ ಬೇಕಾದ ಹಾಗೇ ಚರ್ಚೆ ಮಾಡುವುದು ಬೇಡ. ಸಾಮೂಹಿಕ ಚರ್ಚೆ ಮಾಡಲಿ. ಅವರ್ಯಾರೋ ನಾಲ್ಕು ಜನ ಚರ್ಚೆ ಮಾಡಿದರೆ ಅಂತಿಮ ನಿರ್ಣಯ ಆಗುವುದಿಲ್ಲ. ಅದು ನನ್ನ ಭಾಷಣ ಅಲ್ಲಾ ಸತೀಶ್ ಜಾರಕಿಹೊಳಿ ಸಂಶೋಧನೆ ಮಾಡಿ ಬರೆದಿದ್ದು ಅಲ್ಲಾ‌. ಇಂತಹ ವಿಷಯದ ಮೇಲೆ ಹಿಂದೂತ್ವ ಗಟ್ಟಿ ಮಾಡಲು ಬಳಸಿಕೊಳುತ್ತಿದ್ದಾರೆ ಎಂದರು.
ಯಡಿಯೂರಪ್ಪನವರು ಬೊಮ್ಮಾಯಿ ಅವರಿಗೆ ಹೇಳಿ ಒಂದು ತಿಂಗಳಲ್ಲಿ ತನಿಖೆ ಮಾಡಿ ವರದಿ ಕೊಡಲು ಹೇಳಿ. ನಾನು ಕ್ಷಮೆ ಮಾತ್ರ ಅಲ್ಲಾ ರಾಜೀನಾಮೆ ಕೊಡಲು ಸಿದ್ದ ಎಂದರು.

https://pragati.taskdun.com/politics/satish-jarakiholiclarificationhindhu-dharma/

https://pragati.taskdun.com/politics/satish-jarakiholistatmentcm-basavaraj-bommaireaction/

Related Articles

Related Articles

Back to top button