Karnataka News

ಶರದ್ ಯಾದವ ನಿಧನ

ಪ್ರಗತಿ ವಾಹಿನಿ ಸುದ್ದಿ, ಬೆಂಗಳೂರು:ಹಿರಿಯ ರಾಜಕೀಯ ಮುಖಂಡ, ಜೆಡಿಯು ಸಂಸ್ಥಾಪಕ ಅಧ್ಯಕ್ಷ ಶರದ್ ಯಾದವ್ (75) ನಿಧನರಾಗಿದ್ದಾರೆ.

ವಿ.ಪಿ. ಸಿಂಗ್ ಮತ್ತು ವಾಜಪೇಯಿ ಸರಕಾರದಲ್ಲಿ ಕೇಂದ್ರ ಸಚಿವರಾಗಿದ್ದ ಶರದ್ ಯಾದವ್ 7 ಬಾರಿ ಲೋಕ ಸಭೆ ಮತ್ತು 4 ಬಾರಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು. 2003-16ರವರೆಗೆ ಜೆಡಿಯು ರಾಷ್ಟ್ರೀಯ ಅಧ್ಯಕ್ಷರಾಗಿದ್ದರು. ಬಿಹಾರದ ಸಿಎಂ ನಿತೀಶ್ ಕುಮಾರ ಅವರಿಗೆ ಆಪ್ತರಾಗಿದ್ದರು.

ಕಳೆದ ಕೆಲ ದನಗಳಿಂದ ಅವರು ಅನಾರೋಗ್ಯಕ್ಕೊಳಗಾಗಿದ್ದ ಅವರು ಗುರುಗ್ರಾಮದ ಪೋರ್ಟಿಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಶರದ್ ಯಾದವ ನಿಧನವನ್ನು ಅವರ ಪುತ್ರಿ ಸುಭಾಷಿಣಿ ಖಚಿತಪಡಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಶರದ್ ಯಾದವ್ ನಿಧನಕ್ಕೆ ಟ್ವೀಟ್ ಮಾಡಿ ಸಂತಾಪ ವ್ಯಕ್ತಪಡಿಸಿದ್ದಾರೆ.

ಆತಂಕ ಹುಟ್ಟಿಸಿದೆ ಆಫ್ರಿಕನ್ ಹಂದಿ ಜ್ವರ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button