
ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಜಿಲ್ಲಾ ಬ್ರಾಹ್ಮಣ ಸಮಾಜ ಟ್ರಸ್ಟ್, ಈ ಶ್ರಾವಣ ಮಾಸದ ಸಡಗರವನ್ನು ಹೆಚ್ಚಿಸಲು ಎರಡು ದಿನಗಳ ಕಾಲ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ‘ಶ್ರಾವಣ ಸಂಭ್ರಮ’ ಆಯೋಜಿಸಿದೆ.
ಆಗಸ್ಟ್ *16 ಮತ್ತು 17 ರಂದು ಬೆಳಗಾವಿಯ ಆನಗೋಳ ರಸ್ತೆಯಲ್ಲಿರುವ ರಾಮನಾಥ ಮಂಗಲ ಕಾರ್ಯಾಲಯದಲ್ಲಿ ಕಾರ್ಯಕ್ರಮ ಆಯೋಜಿಸಿದೆ.
ಸಮಾಜದ 70ಕ್ಕೂ ಹೆಚ್ಚು ಉದ್ಯಮಿಗಳು, ಕಲಾವಿದರು ಹಾಗೂ ಸೇವಾ ಪೂರೈಕೆದಾರರು ಉತ್ಪನ್ನಗಳು ಮತ್ತು ಸೇವೆಗಳ ಪ್ರದರ್ಶನ ಹಾಗೂ ಮಾರಾಟ ಮಾಡುವರು. ಇದಕ್ಕಾಗಿ 50ಕ್ಕೂ ಹೆಚ್ಚು ಆಕರ್ಷಕ ಸ್ಟಾಲ್ಗಳನ್ನು ಸಜ್ಜುಗೊಳಿಸಲಾಗಿದೆ.
ಬಟ್ಟೆಗಳು, ಆಭರಣಗಳು, ಅಲಂಕಾರಿಕ ವಸ್ತುಗಳು, ರುಚಿಕರ ಆಹಾರ ಮತ್ತು ಇನ್ನೂ ಅನೇಕ ವಸ್ತುಗಳು ಒಂದೇ ಕಡೆ ಇರಲಿವೆ.
ಈ ಹಬ್ಬದಲ್ಲಿ ಕರಾಓಕೆ ಸಂಗೀತ, ಮಕ್ಕಳ ಪ್ರತಿಭಾನ್ವೇಷಣೆ, ಮಹಿಳೆಯರ ಸ್ಪರ್ಧೆಗಳು, ಆಟಗಳು ಇರಲಿವೆ. ಹಬ್ಬದ ಕಳೆ ಹೆಚ್ಚಿಸುವ ಕಾರ್ಯಕ್ರಮಗಳೂ ಇರಲಿವೆ.
*ಇದೇ ಸಂದರ್ಭದಲ್ಲಿ 2025ನೇ ಸಾಲಿನಲ್ಲಿ SSLC ಮತ್ತು PUC 2ನೇ ವರ್ಷದ ಪರೀಕ್ಷೆಗಳಲ್ಲಿ ಶೇ 90ಕ್ಕೂ ಹೆಚ್ಚಿನ ಅಂಕ ಗಳಿಸಿದ ಸಮಾಜದ ವಿದ್ಯಾರ್ಥಿ/ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನೂ ಸಹ ಆಯೋಜಿಸಲಾಗಿದೆ. ವಸ್ತು ಪ್ರದರ್ಶನವು ಬೆಳಿಗ್ಗೆ 11 ಘಂಟೆಯಿಂದ ರಾತ್ರಿ 9 ಘಂಟೆಯವರೆಗೆ ಸಾರ್ವಜನಿಕರಿಗೆ ಮುಕ್ತವಿರಲಿದೆ.
ಸ್ಥಳೀಯ ಕಲೆ ಹಾಗೂ ಉದ್ಯಮಗಳಿಗೆ ಬೆಂಬಲ ನೀಡುವ ಉದ್ದೇಶ ಈ ಕಾರ್ಯಕ್ರಮದ್ದು ಎಂದು ಟ್ರಸ್ಟ್ ಅಧ್ಯಕ್ಷ ರಾಮ ಭಂಡಾರೆ, ಉಪಾಧ್ಯಕ್ಷರಾದ ಭರತ್ ದೇಶಪಾಂಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ವಿಲಾಸ ಬದಾಮಿ -9880291605, ಅನುಶ್ರೀ ದೇಶಪಾಂಡೆ -9141519326, ಚಂದ್ರಶೇಖರ ನವಲಗುಂದ – 9611610642 ಅವರನ್ನು ಸಂಪರ್ಕಿಸಲು ಕೋರಲಾಗಿದೆ.