Latest

ಶ್ರಾವಣ ಸೋಮವಾರದ ವ್ರತ

 ೨೭ ಜುಲೈ ಹಾಗೂ ೩, ೧೦ ಮತ್ತು ೧೭ ಆಗಸ್ಟ್ ಈ ದಿನಗಳಂದು ಶ್ರಾವಣ ಸೋಮವಾರದ ವ್ರತವನ್ನು  ಆಚರಿಸಲಾಗುತ್ತದೆ. ಆ ನಿಮಿತ್ತ ಈ ಲೇಖನ
 ‘ಕೊರೋನಾ ಸಾಂಕ್ರಾಮಿಕ ರೋಗದ ಕಾರಣದಿಂದ ಮನೆಯಿಂದ ಹೊರಗೆ ಬರಲು ಮಿತಿ ಇರುವುದರಿಂದ ‘ಶ್ರಾವಣ ಸೋಮವಾರದ  ವ್ರತವನ್ನು ಹೇಗೆ ಆಚರಿಸಬಹುದು ?
ಸದ್ಯ ಜಗತ್ತಿನಾದ್ಯಂತ ಕೊರೋನಾ ಮಹಾಮಾರಿಯಿಂದ ಎಲ್ಲೆಡೆ ಜನರ ಸಂಚಾರಕ್ಕೆ ಅನೇಕ ನಿರ್ಬಂಧಗಳನ್ನು ವಿಧಿಸಲಾಗಿದೆ. ಭಾರತದಲ್ಲಿಯೂ ವಿವಿಧ ರಾಜ್ಯಗಳಲ್ಲಿ ಸಂಚಾರ  ನಿರ್ಬಂಧವನ್ನು (ಲಾಕ್‌ಡೌನ್) ವಿಧಿಸಲಾಗಿದೆ. ಕೆಲವು ಸ್ಥಳಗಳಲ್ಲಿ ಕೊರೋನಾ ಸೋಂಕು ಕಡಿಮೆಯಿದ್ದರೂ, ಜನರು ಮನೆಯಿಂದ ಹೊರಗೆ ಬರಲು ಅನೇಕ ನಿರ್ಬಂಧಗಳು ಇದ್ದೇ ಇವೆ. ಇದರಿಂದ ಹಿಂದೂಗಳ ವಿವಿಧ ಹಬ್ಬ, ಉತ್ಸವ, ವ್ರತಗಳನ್ನು ಎಂದಿನಂತೆ ಸಾಮೂಹಿಕ ರೀತಿಯಲ್ಲಿ ಆಚರಿಸಲು ನಿರ್ಬಂಧಗಳಿವೆ. ಕೊರೋನಾದಂತಹ ಆಪತ್ಕಾಲದ ಹಿನ್ನೆಲೆಯಲ್ಲಿ ಹಿಂದೂ ಧರ್ಮವು ಧರ್ಮಾಚರಣೆಯಲ್ಲಿ ಕೆಲವೊಂದು ಪರ್ಯಾಯಗಳನ್ನು ತಿಳಿಸಿದೆ. ಇದನ್ನು ‘ಆಪದ್ಧರ್ಮ ಎಂದು ಹೇಳುತ್ತಾರೆ. ಆಪದ್ಧರ್ಮವೆಂದರೆ ‘ಆಪದಿ ಕರ್ತವ್ಯೋ ಧರ್ಮಃ| ಎಂದರೆ ಆಪತ್ತಿನ ಸಮಯದಲ್ಲಿ ಆಚರಿಸುವ ಧರ್ಮ.
ಇಂತಹ ಸಂದರ್ಭದಲ್ಲಿ ಶ್ರಾವಣ ತಿಂಗಳು ಬಂದಿರುವುದರಿಂದ ಸಂಪತ್ಕಾಲದಲ್ಲಿ ತಿಳಿಸಿರುವ ಪದ್ಧತಿಯಿಂದ ಈ ಕಾಲಾವಧಿಯಲ್ಲಿ ಸಾಮೂಹಿಕ ರೂಪದಲ್ಲಿ ಆಚರಿಸುವ ಪರಂಪರೆಯಿರುವ  ವಿವಿಧ ಹಬ್ಬಗಳು ಮತ್ತು ವ್ರತಗಳನ್ನು ಎಂದಿನಂತೆ ಆಚರಿಸಲು ಆಗುವುದಿಲ್ಲ. ಈ ದೃಷ್ಟಿಯಿಂದ ಪ್ರಸ್ತುತ ಲೇಖನದಲ್ಲಿ ಸದ್ಯದ ದೃಷ್ಟಿಯಿಂದ ಧರ್ಮಾಚರಣೆಯೆಂದು ಶ್ರಾವಣ ಸೋಮವಾರದಂದು ಮಾಡುವ ‘ಶ್ರಾವಣ ಸೋಮವಾರ ವ್ರತವನ್ನು ಹೇಗೆ ಆಚರಿಸುವುದು, ಎನ್ನುವ ವಿಚಾರವನ್ನು ಮಾಡಲಾಗಿದೆ. ಇಲ್ಲಿ ಮಹತ್ವದ ವಿಷಯವೆಂದರೆ, ಹಿಂದೂ ಧರ್ಮವು ಯಾವ ಮಟ್ಟದ ವರೆಗೆ ಮಾನವನ ವಿಚಾರವನ್ನು ಮಾಡಿದೆ ಎಂಬುದು ಇದರಿಂದ ಕಲಿಯಬಹುದಾಗಿದೆ. ಅದರಂತೆ ಹಿಂದೂ ಧರ್ಮದ ಶ್ರೇಷ್ಠತೆ ಗಮನಕ್ಕೆ ಬರುತ್ತದೆ.
ಶ್ರಾವಣ ಸೋಮವಾರದಂದು ಶಿವನ ದೇವಸ್ಥಾನಕ್ಕೆ ಹೋಗಿ  ಶಿವಲಿಂಗಕ್ಕೆ ಅಭಿಷೇಕ  ಮಾಡುವ ಪದ್ಧತಿಯಿದೆ. ‘ಲಾಕ್‌ಡೌನ್’ ಕಾರಣದಿಂದ  ಮನೆಯಿಂದ ಹೊರಗೆ ಶಿವಾಲಯಕ್ಕೆ ಹೋಗಲು ಸಾಧ್ಯವಿಲ್ಲದವರು ‘ಆಪದ್ಧರ್ಮದ ಭಾಗವೆಂದು ಮನೆಯಲ್ಲಿಯೇ ಇದ್ದು, ಈ ವ್ರತವನ್ನು ಯಾವ ರೀತಿ ಆಚರಿಸಬೇಕು ಎನ್ನುವ ವಿಷಯದ ಲೇಖನದಲ್ಲಿ ಧರ್ಮಶಾಸ್ತ್ರಾಧಾರಿತ ವಿಶ್ಲೇಷಣೆಯನ್ನು ಮಾಡಲಾಗಿದೆ.
೧. ಶ್ರಾವಣ ಸೋಮವಾರದಂದು ಉಪವಾಸವನ್ನು ಮಾಡಿ ಶಿವನನ್ನು ವಿಧಿವತ್ತಾಗಿ ಪೂಜಿಸುವುದು.
‘ಉಪೋಷಿತಃ ಶುಚಿರ್ಭೂತ್ವಾ ಸೋಮವಾರೇ ಜಿತೇನ್ದ್ರಿಯಃ|
ವೈದಿಕೈರ್ಲೌಕಿಕೈರ್ಮನ್ತ್ರೈರ್ವಿಧಿವತ್ಪೂಜಯೇಚ್ಛಿವಮ್ ||’
– ಸ್ಕಂದಪುರಾಣ, ಬ್ರಹ್ಮಖಂಡ, ಅಧ್ಯಾಯ ೮, ಶ್ಲೋಕ ೧೦
ಅರ್ಥ: ಸಂಯಮ ಮತ್ತು ಶುಚಿರ್ಭೂತ ಮುಂತಾದ ನಿಯಮಗಳ ಪಾಲನೆಯನ್ನು ಮಾಡುತ್ತ ಸೋಮವಾರದಂದು ಉಪವಾಸ ಮಾಡಿ ವೈದಿಕ ಅಥವಾ ಲೌಕಿಕ ಮಂತ್ರಗಳಿಂದ ಶಿವನನ್ನು ವಿಧಿವತ್ತಾಗಿ ಪೂಜಿಸಬೇಕು.
ಶಾಸ್ತ್ರಕಾರರು ಮನಸ್ಸಿನ ಮೇಲೆ ಸಂಯಮವನ್ನು ಇಟ್ಟು, ಶುಚಿರ್ಭೂತರಾಗಿ ನಿಯಮಗಳನ್ನು ಪಾಲಿಸುವ ವಿಷಯದಲ್ಲಿ ಮತ್ತು  ಉಪವಾಸ ಮಾಡುವ ವಿಷಯದಲ್ಲಿ ತಿಳಿಸಿದ್ದಾರೆ. ಅದರಂತೆ ತಮ್ಮ ತಮ್ಮ ಜ್ಞಾನದ ಆಧಾರದಲ್ಲಿ ಸಾಧ್ಯವಿದ್ದರೆ, ಆ ವೈದಿಕ ಅಥವಾ ಲೌಕಿಕ ಮಂತ್ರಗಳ ಮೂಲಕ ಶಿವನ ಪೂಜೆಯನ್ನು ಮಾಡಲು ತಿಳಿಸಿದ್ದಾರೆ.
೨. ಶಿವನ ಪೂಜೆಯನ್ನು ಹೇಗೆ ಮಾಡಬೇಕು?
ಅ. ತಮ್ಮ ಮನೆಯಲ್ಲಿರುವ ಶಿವಲಿಂಗದ ಪೂಜೆಯನ್ನು ಮಾಡಬೇಕು.
ಆ. ಒಂದು ವೇಳೆ ಶಿವಲಿಂಗ ಉಪಲಬ್ಧವಿಲ್ಲದಿದ್ದರೆ, ಶಿವನ ಚಿತ್ರದ ಪೂಜೆಯನ್ನು ಮಾಡಬೇಕು.
ಇ. ಶಿವನ ಚಿತ್ರ ಕೂಡ ಉಪಲಬ್ಧವಿಲ್ಲದಿದ್ದರೆ, ಮಣೆಯ ಮೇಲೆ ಶಿವಲಿಂಗದ ಅಥವಾ ಶಿವನ ಚಿತ್ರವನ್ನು ಬಿಡಿಸಿ ಅದರ ಪೂಜೆಯನ್ನು ಮಾಡಬೇಕು.
ಈ. ಮೇಲಿನವುಗಳನ್ನು ಯಾವುದೂ ಸಾಧ್ಯವಿಲ್ಲದಿದ್ದರೆ, ಶಿವನ ‘ಓಂ ನಮಃ ಶಿವಾಯ ಈ  ನಾಮಮಂತ್ರವನ್ನು ಬರೆದು  ಅದರ ಪೂಜೆಯನ್ನು ಕೂಡ ಮಾಡಬಹುದಾಗಿದೆ.
– ವಿನೋದ ಕಾಮತ,
ರಾಜ್ಯ ವಕ್ತಾರರು, ಸನಾತನ ಸಂಸ್ಥೆ, ಕರ್ನಾಟಕ
ಆಧಾರ: ಸನಾತನ ಸಂಸ್ಥೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button