*ಶ್ರೀ ಬೀರೇಶ್ವರ ಸೊಸೈಟಿಯ 155ನೇ ಶಾಖೆ ಉದ್ಘಾಟನೆ*
ಪ್ರಗತಿವಾಹಿನಿ ಸುದ್ದಿ; ವಡಗಾವಿ: ದೇಶ ಇಂದು ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ವೇಗವಾಗಿ ಬೆಳೆಯುತ್ತಿದ್ದು, ಈ ಕ್ಷೇತ್ರದಲ್ಲಿ ಹೂಡಿಕೆಯೂ ಹೆಚ್ಚುತ್ತಿದೆ ಎಂದು ಗದಗ ಕಂಬಳ ತೋಂಟದರ‍್ಯ ಮಠದ ಡಾ.ಶ್ರೀ ಸಿದ್ದರಾಮ ಸ್ವಾಮೀಜಿ ಹೇಳಿದರು.
ನಗರದ ವಡಗಾವಿ ಮುಖ್ಯರಸ್ತೆಯ ಸೋನಾರಗಲ್ಲಿಯಲ್ಲಿ ಶುಕ್ರವಾರ ಜೊಲ್ಲೆ ಸಮೂಹ ಸಂಸ್ಥೆಗಳ, ಶ್ರೀ ಬೀರೇಶ್ವರ ಕೋ-ಆಪ್ಕ್ರೆಡಿಟ್ಸೊಸೈಟಿಯ 155ನೇ ಶಾಖೆ ಉದ್ಘಾಟನೆ ಸಮಾರಂಭದ ಸಾನ್ನಿದ್ಯ ವಹಿಸಿ ಅವರು ಮಾತನಾಡಿದರು.
ಯಾವುದೇ ಹಣಕಾಸು ಅಭಿವೃದ್ಧಿ ಹೊಂದಬೇಕಾದರೆ ವಿಶ್ವಾಸಾರ್ಹತೆ ಬಹಳ ಮುಖ್ಯ. ಬೀರೇಶ್ವರ ಕೋ-ಆಪ್ಸೊಸೈಟಿ ಪ್ರಸ್ತುತ 3,60 ಲಕ್ಷ ಸದಸ್ಯರನ್ನು ಹೊಂದಿದ್ದು 3400 ಕೋಟಿ ರೂಪಾಯಿಗೂ ಹೆಚ್ಚು ಠೇವಣಿ ಹೊಂದಿ ಕಡಿಮೆ ಅವಧಿಯಲ್ಲಿ ಅಗಾಧವಾಗಿ ಬೆಳೆದಿದೆ. ರಾಷ್ಟ್ರೀಕೃತ ಬ್ಯಾಂಕುಗಳಿಗೂ ಪೈಪೋಟಿ ನೀಡುವ ಮಟ್ಟಕ್ಕೆ ಅಭಿವೃದ್ಧಿ ಹೊಂದಿದೆ. ಇದರ ಹಿಂದೆ ಸಂಸ್ಥೆಯ ಸಂಸ್ಥಾಪಕರಾದ ಅಣ್ಣಾಸಾಹೇಬ ಜೊಲ್ಲೆ ಶಶಿಕಲಾ ಜೊಲ್ಲೆ ದಂಪತಿ ಹಾಗೂ ಸಂಸ್ಥೆಯ ಸಿಬ್ಬಂದಿಯ ಶ್ರಮ ಅಡಗಿದೆ ಎಂದರು.
ಸಾಲಪಡೆದವರನ್ನು ಗೌರವದಿಂದ ಕಾಣುವ, ಠೇವಣಿ ಇಟ್ಟವರ ಹಿತಾಸಕ್ತಿ ಕಾಪಾಡುವ ಮತ್ತು ಸಮಾಜದಲ್ಲಿ ವಿಶ್ವಾಸಾರ್ಹತೆ ಕಾಪಾಡಿಕೊಳ್ಳುವ ಹಣಕಾಸು ಸಂಸ್ಥೆಗಳು ಮಾತ್ರ ಅಭಿವೃದ್ಧಿ ಹೊಂದುತ್ತವೆ. ಇದಕ್ಕೆ ಶ್ರೀ ಬೀರೇಶ್ವರ ಕ್ರೆಡಿಟ್ಸೊಸೈಟಿ ಬೆಳವಣಿಗೆ ಸಾಕ್ಷಿ ಎಂದು ತಿಳಿಸಿದರು.
ಶಾಸಕ ಅಭಯ ಪಾಟೀಲ್ ಮಾತನಾಡಿ, ಸಹಕಾರ ಕ್ಷೇತ್ರದಲ್ಲಿ ತನ್ನದೇ ಆದ ಛಾಪುಮೂಡಿಸಿದ ಕೆಲವೇ ಸಂಸ್ಥೆಗಳಲ್ಲಿ ಜೊಲ್ಲೆ ಸಮೂಹಸಂಸ್ಥೆಯೂ ಒಂದಾಗಿದೆ. ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಜೊಲ್ಲೆ ಕುಟುಂಬ ಸಹಕಾರ ಕ್ಷೇತ್ರದಲ್ಲಿ ನಿರಂತರ ಸೇವೆಸಲ್ಲಿಸುತ್ತಿರುವುದು ಶ್ಲಾಘನೀಯ. ನಾನು ಪ್ರತಿನಿಧಿಸುವ ಬೆಳಗಾವಿ ದಕ್ಷಿಣ, ಕ್ಷೇತ್ರದಲ್ಲಿ ಈ ಶಾಖೆ ತೆರೆದಿರುವುದು ನನಗೆ ಹೆಮ್ಮೆಯ ಸಂಗತಿ ಎಂದರು.
ಕಾರ್ಯಕ್ರಮದಲ್ಲಿ ಗ್ರಾಹಕರಿಗೆ ಸಾಂಕೇತಿಕವಾಗಿ ಪಾಸ್ ಬು ಕ್ ಗಳನ್ನು ವಿತರಿಸಲಾಯಿತು. ಸಂಸ್ಥೆಯ ಜನರಲ್ ಮ್ಯಾನೇಜರ್ ಚೌಗುಲೆ ಮಾತನಾಡಿದರು. ಜ್ಯೋತಿಪ್ರಸಾದ ಜೊಲ್ಲೆ ಸಂಸ್ಥೆಯ ನಿರ್ದೇಶಕ ವಿಜಯ ರಾವುತ್ ಮೊದಲಾದವರು ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ