ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬಿಜೆಪಿ ವಿರುದ್ಧ ಮಾಜಿ ಸಚಿವ ಜನಾರ್ಧನ ರೆಡ್ಡಿ ಮುನಿಸು ವಿಚಾರವಾಗಿ ಮಾತನಾಡಿರುವ ಸಾರಿಗೆ ಸಚಿವ ಶ್ರೀರಾಮುಲು, ಬಿಜೆಪಿಗೆ ಜನಾರ್ಧನ ರೆಡ್ಡಿ ಅವರ ಕೊಡುಗೆ ಅಪಾರ. ಹೀಗಿರುವಾಗ ಜನಾರ್ಧನ ರೆಡ್ದಿ ಯಾಕೆ ಆ ರೀತಿ ಮಾತನಾಡಿದ್ದಾರೆ ಎಂಬುದು ಗೊತ್ತಿಲ್ಲ ಎಂದು ಹೇಳಿದ್ದಾರೆ.
ಬಿಜೆಪಿ ವಿರುದ್ಧ ಜನಾರ್ಧನ ರೆಡ್ಡಿ ಬೇಸರಿಸಿಕೊಂಡ ವಿಚಾರವಾಗಿ ಬಳ್ಳಾರಿಯಲ್ಲಿ ಪ್ರತಿಕ್ರಿಯಿಸಿದ ಶ್ರೀರಾಮುಲು, ಜನಾರ್ಧನ ರೆಡ್ಡಿ ಯಾವತ್ತೂ ಬಿಜೆಪಿಯ ಪರವಾಗಿ ಇದ್ದವರು. ಬಿಜೆಪಿಯಲ್ಲಿಯೇ ಇದ್ದಾರೆ. ಅವರಿಗೆ ಮುಜುಗರವಾಗುವ ಕೆಲಸ ಯಾರೂ ಮಾಡಿಲ್ಲ. ಹೀಗಿರುವಾಗ ಅವರು ಮುನಿಸಿಕೊಂಡ ಬಗ್ಗೆ ಗೊತ್ತಿಲ್ಲ. ಅವರು ಏನು ಮಾತನಾಡಿದ್ದಾರೆ ಎಂಬುದು ಗೊತ್ತಿಲ್ಲ. ಮಾಧ್ಯಮಗಳ ಮೂಲಕವೇ ನನಗೆ ವಿಚಾರ ಗೊತ್ತಾಯಿತು. ಅವರೊಂದಿಗೆ ಮಾತನಾಡುತ್ತೇನೆ ಎಂದರು.
ನಾನೇ ಜನಾರ್ಧನ ರೆಡ್ಡಿ ಅವರ ಭೇಟಿಯಾಗಿ ಚರ್ಚಿಸುತ್ತೇನೆ. ಅವರ ಮನವೊಲಿಕೆ ಯತ್ನ ಮಾಡುತ್ತೇನೆ. ಪಕ್ಷದ ನಾಯಕರೊಂದಿಗೂ ರೆಡ್ದಿ ವಿಚಾರವಾಗಿ ಮಾತನಾಡುತ್ತೇನೆ. ಒಂದು ವೇಳೆ ಜನಾರ್ಧನ ರೆಡ್ಡಿ ಅವರಿಗೆ ಬೇಸರವಾಗಿದ್ದರೆ ಅವರನ್ನು ಮನವೊಲಿಸಿ ಸ್ಮಾಧಾನ ಪಡಿಸಲಾಗುವುದು ಎಂದು ಹೇಳಿದರು.
ಪಕ್ಷ ಕಟ್ಟುವ ಕೆಲಸದಲ್ಲಿ ಜನಾರ್ಧನ ರೆಡ್ದಿ ಕೊಡುಗೆ ಅಪಾರ. ಯಾವ ಕಾರಣಕ್ಕೂ ಅವರನ್ನು ತಿರಸ್ಕಾರ ಮಾಡುವ ಕೆಲಸ ಮಾಡಿಲ್ಲ, ಅವರಿಗೆ ಮುಜುಗರ ತರುವ ಹಾಗೂ ನಡೆದುಕೊಂಡಿಲ್ಲ. ಏನೇ ಲೋಪವಾಗಿದ್ದರೂ ಬಿಜೆಪಿ ನಾಯಕರ ಜೊತೆ ಚಚಿಸಿ ಸರಿಪಡಿಸುತ್ತೇನೆ ಎಂದರು.
ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಜನಾರ್ಧನ ರೆಡ್ದಿ, ವಿಪಕ್ಷದವರು ನನ್ನನ್ನು ವಿರುದ್ಧ ಟೀಕಿಸಿದರೆ ಏನೂ ಅನಿಸಲ್ಲ. ಆದರೆ ಬಿಜೆಪಿಯಿಂದಲೇ ಇದನ್ನು ನಿರೀಕ್ಷಿಸಿರಲಿಲ್ಲ. ಪಕ್ಷ ಕಟ್ಟಲು, ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಪಾತ್ರವೂ ಮಹತ್ವದ್ದಾಗಿದೆ. ರಾಜಕೀಯವಾಗಿ ಶೀಘ್ರದಲ್ಲಿಯೇ ನನ್ನ ಮುಂದಿನ ನಡೆ ತಿಳಿಸುತ್ತೇನೆ ಎಂದು ಹೇಳಿದ್ದಾರೆ. ಗಾಲಿ ಜನಾರ್ಧನ ರೆಡ್ಡಿ ಅವರ ಈ ಹೇಳಿಕೆ ಬಿಜೆಪಿ ವಿರುದ್ಧ ಮುನಿಸಿಕೊಂಡಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
ಎಲ್ಲ ರಂಗಗಳಲ್ಲಿ ಕನ್ನಡ ಬಳಕೆಗೆ ಕಾನೂನು ರಚನೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
https://pragati.taskdun.com/politics/cm-basavaraj-bommaikarnataka-govtbillkannada-compulsory/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ