Belagavi NewsBelgaum NewsKannada NewsKarnataka NewsLatest

ಬೆಳಗಾವಿಯಲ್ಲಿ ಮೊದಲ ಬಾರಿಗೆ ಶ್ರೇಯಾ ಘೋಷಾಲ್ ಕಮಾಲ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಪ್ರಖ್ಯಾತ ಗಾಯಕಿ ಶ್ರೇಯಾ ಘೋಷಾಲ್ ಶುಕ್ರವಾರ ಸಂಜೆ ಬೆಳಗಾವಿಯಲ್ಲಿ ತಮ್ಮ ಮೊದಲ ಲೈವ್ ಪ್ರೋಗ್ರಾಮ್ ನೀಡಿದರು.

ಕೆಎಲ್ಎಸ್ ಸಂಸ್ಥೆಯ ಜಿಐಟಿ ಮೈದಾನದಲ್ಲಿ 3 ದಿನಗಳ ಔರಾ ಸಾಂಸ್ಕೃತಿಕ ಉತ್ಸವದ ಅಂಗವಾಗಿ ಕೊನೆಯ ದಿನ ಶ್ರೇಯಾ ಗೋಷಾಲ್ ಅವರ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕನ್ನಡ, ಹಿಂದಿ, ಮರಾಠಿ ಹಾಡುಗಳನ್ನು ಹಾಡುವ ಮೂಲಕ ರಂಜಿಸಿದ ಶ್ರೇಯಾ ಗೋಶಾಲ್, 15 ಸಾವಿರಕ್ಕೂ ಹೆಚ್ಚು ಜನರನ್ನು ತಮ್ಮ ಸುಮಧುರ ಗಾಯನದ ಮೂಲಕ ಕುಣಿಸಿದರು. ಮುಂಗಾರು ಮಳೆಯೇ…, ಕಣ್ಣು ಹೊಡೆಯಾಕ… ರಫ್ತಾ, ಪಿಂಗಾಕಾ ಪೋರಿ, ಅಪ್ಸರಾ ಆಲಿ… ಮತ್ತಿತರ ಹಾಡುಗಳ ಮೂಲಕ ಸೇರಿದ್ದವರನ್ನು ಬೇರೆಯದೇ ಲೋಕಕ್ಕೆ ಕೊಂಡೊಯ್ದರು.

ಕೆಎಲ್ ಎಸ್ ಜಿಐಟಿ ಪ್ರತಿವರ್ಷ ಈ ಭಾಗದ ಅತಿದೊಡ್ಡ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಔರಾವನ್ನು ಸಂಘಟಿಸುತ್ತಿದೆ. ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾದಿಂದ ಎಲ್ಲಾ ಪದವಿ ವಿದ್ಯಾರ್ಥಿಗಳಿಗೆ ಕ್ಯಾಂಪಸ್‌ನಲ್ಲಿ 46 ಕ್ಕೂ ಹೆಚ್ಚು ಸಾಂಸ್ಕೃತಿಕ ಸ್ಪರ್ಧೆಗಳನ್ನು ನಡೆಸಲಾಯಿತು. 8 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Related Articles

Back to top button