Belagavi NewsBelgaum NewsKannada NewsKarnataka NewsNational

*ಭಾರತೀಯ ಆಹಾರ ನಿಗಮದ ಸಲಹಾ ಸಮಿತಿಗೆ ಶ್ರೀಕಾಂತ್ ಕೌಜಲಗಿ ನೇಮಕ*

ಪ್ರಗತಿವಾಹಿನಿ ಸುದ್ದಿ: ಕೇಂದ್ರ ಸರ್ಕಾರದ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದಿಂದ ಕರ್ನಾಟಕ ರಾಜ್ಯದ ಭಾರತೀಯ ಆಹಾರ ನಿಗಮದ ಸಲಹಾ ಸಮಿತಿಗೆ  ಅರಭಾವಿ ಮತಕ್ಷೇತ್ರದ ಹಳ್ಳೂರ ಗ್ರಾಮದ  ಶ್ರೀಕಾಂತ್ ಕೌಜಲಗಿ ಅವರನ್ನು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರ ಶಿಫಾರಸ್ಸಿನ ಮೇರೆಗೆ  ನಾಮನಿರ್ದೇಶನ ಸದಸ್ಯರನ್ನಾಗಿ ನೇಮಕ  ಮಾಡಿ ಆದೇಶ ಹೊರಡಿಸಿದ್ದಾರೆ.

ಕೇಂದ್ರ ಸರ್ಕಾರದ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ ಸಚಿವರಾದ ಪ್ರಹ್ಲಾದ ಜೋಶಿ ಹಾಗೂ ರಾಜ್ಯಸಭಾ ಸಂಸದರು ಹಾಗೂ ಕರ್ನಾಟಕ ರಾಜ್ಯದ ಭಾರತೀಯ ಆಹಾರ ನಿಗಮದ ಸಲಹಾ ಸಮಿತಿ ಅಧ್ಯಕ್ಷ ಈರಣ್ಣ ಕಡಾಡಿ ಅವರು ನಾಮನಿರ್ದೇಶನ ಸದಸ್ಯರನ್ನಾಗಿ ನೇಮಕ  ಮಾಡಿದಕ್ಕಾಗಿ ಅಭಿನಂದಿಸುವುದಾಗಿ ಶ್ರೀಕಾಂತ್ ಕೌಜಲಗಿ  ತಿಳಿಸಿದ್ದಾರೆ.

Home add -Advt

Related Articles

Back to top button