
ಶ್ರೀಮಂತ ಪಾಟೀಲ ಕಿಡ್ನ್ಯಾಪ್ ಆಗಿದ್ದಾರೆ…
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಕಾಗವಾಡ ಶಾಸಕ ಶ್ರೀಮಂತ ಪಾಟೀಲ ನಾಪತ್ತೆ ಮತ್ತು ಆಸ್ಪತ್ರೆಗೆ ದಾಖಲು ಪ್ರಕರಣ ವಿಚಿತ್ರ ತಿರುವು ಪಡೆದಿದೆ.
ಅವರನ್ನು ಅಪಹರಣ ಮಾಡಿಕೊಂಡು ಹೋಗಿ ಮುಂಬೈ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಆರೋಗ್ಯವಾಗಿದ್ದೇನೆ ಎಂದರೂ ಅವರನ್ನು ಅಸ್ಪತ್ರೆಗ ದಾಖಲಿಸಿ, ಪೊಲೀಸ್ ಕಾವಲಿನಲ್ಲಿರಿಸಲಾಗಿದೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ವಿಧಾನಸಭೆಯಲ್ಲಿ ಆರೋಪಿಸಿದ್ದಾರೆ.
ಬಿಜೆಪಿಯ ಮಾಜಿ ಸಚಿವ ಲಕ್ಷ್ಮಣ ಸವದಿ ಸೇರಿದಂತೆ ಕೆಲವರು ಸೇರಿ ಅವರನ್ನು ಅಪಹರಿಸಿದ್ದಾರೆ ಎಂದು ಅವರು ಆರೋಪಿಸಿ, ಆಸ್ಪತ್ರೆಗೆ ದಾಖಲಾಗಿರುವ ಫೋಟೋಗಳನ್ನು, ವಿಮಾನ ಟಿಕೆಟ್ ಗಳನ್ನು ಪ್ರದರ್ಶಿಸಿದರು.
ನಿನ್ನೆ ಅವರು ಆರೋಗ್ಯವಾಗಿದ್ದರು. ಆದರೆ ನಂತರ ಅವರು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ವಿಚಾರಿಸಿದಾಗ, ಬಿಜೆಪಿಯವರು ಈ ರೀತಿ ಮಾಡಿದ್ದಾರೆಂದು ಗೊತ್ತಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಆರೋಪಿಸಿದರು.
ನಮ್ಮ ರೆಸಾರ್ಟ್ ಪಕ್ಕದಲ್ಲೇ ಆಸ್ಪತ್ರೆ ಇತ್ತು. ಇಲ್ಲಿಂದ ಚನ್ನೈಗೆ ಕರೆದುಕೊಂಡು ಹೋಗಿ, ಮುಂಬೈಗೆ ಹೋಗಿ ಆಸ್ಪತ್ರೆಗೆ ದಾಖಲಿಸುವುದೇನಿತ್ತು? ಈ ಬಗ್ಗೆ ಗೃಹ ಇಲಾಖೆಯಿಂದ ತನಿಖೆ ನಡೆಸಿ, ಅವರನ್ನು ಕರೆದುಕೊಂಡು ಬರಬೇಕು ಎಂದು ಪಟ್ಟು ಹಿಡಿದರು.
ಈ ಕುರಿತು ಚರ್ಚೆ, ಆರೋಪ, ಪ್ರತ್ಯಾರೋಪ ಮುಂದುವರಿದಿದೆ. ಸಧನದಲ್ಲಿ ಕೋಲಾಹಲ ನಡೆಯುತ್ತಿದೆ.
ಕೈ ತಪ್ಪಿಸಿಕೊಂಡ ಶ್ರೀಮಂತ ಪಾಟೀಲ ಎಲ್ಲಿದ್ದಾರೆ ನೋಡಿ
ರಾತ್ರೋರಾತ್ರಿ ದೋಸ್ತಿಗೆ ಮತ್ತೊಂದು ಶಾಕ್