ಪ್ರಗತಿವಾಹಿನಿ ಸುದ್ದಿ: ಬಿಜೆಪಿ ಹಿರಿಯ ನಾಯಕ ಶ್ರೀರಾಮಲು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಾರೆ ಎನ್ನುವ ಚರ್ಚೆಗಳು ರಾಜ್ಯ ರಾಜಕೀಯದಲ್ಲಿ ನಡೆಯುತಿದ್ದು, ಈಗ ಸದ್ಯ ಅವರು ಹೇಳಿಕೆ ನೀಡಿರುವ ಮಾತುಗಳು ಅವರು ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎಂಬುದಕ್ಕೆ ಪುಷ್ಟಿ ನೀಡಿವೆ.
ರಾಜ್ಯ ಬಿಜೆಪಿಯಲ್ಲಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಮತ್ತು ಮಾಜಿ ಸಚಿವ ಬಿ.ಶ್ರೀರಾಮುಲು ನಡುವಿನ ಮಾತಿನ ಗುದ್ದಾಟ ತಾರಕಕ್ಕೇರಿದೆ. ಇದರ ನಡುವೆಯೇ ರಾಮುಲುಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಕಾಂಗ್ರೆಸ್ ಗೆ ಬರಲು ಆಹ್ವಾನಿಸಿದ್ದಾರೆ ಎಂದು ರೆಡ್ಡಿ ಅವರು ನಿನ್ನೆ ಬಾಂಬ್ ಸಿಡಿದ್ದರು. ಈ ಕುರಿತು ಪ್ರತಿಕ್ರಿಯೆ ನೀಡಿರುವ ರಾಮುಲು. ನಾನು ಒಳ್ಳೆಯವನು ಅಂತಾ ಅವರಿಗೆ ಗೊತ್ತಿದೆ. ಅಕ್ಕಾಗಿ ಗೌರವದಿಂದ ನನ್ನೊಂದಿಗೆ ರಾಜಕೀಯ ಹೊರತುಪಡಿಸಿ ಅಭಿಮಾನದಿಂದ ಕರೆದಿದ್ದಾರೆ. ಮಾತನಾಡಿಸುತ್ತಿದ್ದಾರೆ ಎಂದು ಶ್ರೀರಾಮುಲ ಹೊಸ ಬಾಂಬ್ ಸಿಡಿಸಿದರು.
ಕಾಂಗ್ರೆಸ್‌ನಿಂದ ಆಫರ್ ಬಂದಿರಲಿ, ಬರದಿರಲಿ. ಯಾರೇ ಕರೆದರೂ ಹೋಗಬೇಕಾ. ಬೇಡವಾ ಎಂಬ ಮನಸ್ಸು ನನಗೆ ಬರಬೇಕು. ಆದರೆ ನನಗೆ ಗೌರವ ನೀಡಿರುವ ಕಾಂಗ್ರೆಸ್‌ನವರಿಗೆ ನಾನು ಕೃತಜ್ಞತೆ ಸಲ್ಲಿಸುವೆ ಎಂದರು.
ಮಾಧ್ಯಮಗಳ ಮೂಲಕ ಬಹಿರಂಗವಾಗಿಯೇ ಕರೆಯುತ್ತಿದ್ದಾರೆ. ಸದ್ಯಕ್ಕೆ ನಾನು ಬಿಜೆಪಿಯಲ್ಲೇ ಇರುವೆ ಎನ್ನುತ್ತಿರುವ ರಾಮುಲು ಅವರು, ತಮ್ಮ ಮುಂದಿನ ನಡೆ ಏನೆಂಬುವುದನ್ನು ಅಲ್ಪವಿರಾಮದಂತೆ ಸೂಕ್ಷ್ಮವಾಗಿ ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ