
ಪ್ರಗತಿವಾಹಿನಿ ಸುದ್ದಿ, ಮೂಡಲಗಿ – ಇಲ್ಲಿಯ ಚೈತನ್ಯ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಸಿದ್ದಲಿಂಗಪ್ಪ ಹೊರಟ್ಟಿ ನಿಧನರಾಗಿದ್ದಾರೆ. ಅವರಿಗೆ 66 ವರ್ಷ ವಯಸ್ಸಾಗಿತ್ತು.
ಕ್ಷತ್ರೀಯ ಸಮಾಜದ ಸಂಘಟನೆ, ಏಡ್ಸ್ ಸೋಂಕಿತ ಮಕ್ಕಳ ಶಿಕ್ಷಣ ಸೇರಿದಂತೆ ಹಲವಾರು ಮಾದರಿ ಕಾರ್ಯಗಳನ್ನು ಮಾಡುತ್ತ ಬಂದಿರುವ ಸಿದ್ದಲಿಂಗಪ್ಪ ಹೊರಟ್ಟಿ, ರಾಜ್ಯಮಟ್ಟದ ಅನೇಕ ಪ್ರಶಸ್ತಿಗಳನ್ನು ಸಹ ಪಡೆದಿದ್ದಾರೆ.
ಚೈತನ್ಯ ಐಟಿಐ ವಸತಿ ಶಾಲೆ ಮೂಡಲಗಿ, ಆರೂಢ ಜ್ಯೋತಿ ಚೈತನ್ಯ ಸ್ಕೂಲ್ ಹುಣಶ್ಯಾಳ, ಕೃಷ್ಣ ಶರ್ಮ ಚೈತನ್ಯ ಸ್ಕೂಲ್ ಬೆಟಗೇರಿ, ಅಬ್ಬಕ್ಕ ನವ ಚೈತನ್ಯ ಸ್ಕೂಲ್ ಕಡಕೋಳ, ಚೈತನ್ಯ ಮಹಿಳಾ ಬ್ಯಾಂಕ್ ಮೂಡಲಗಿ, ಚೈತನ್ಯ ಅರ್ಬನ್ ಸೊಸೈಟಿ ಮೂಡಲಗಿ ಇವೆಲ್ಲ ಸಿದ್ದಲಿಂಗಪ್ಪ ಸ್ಥಾಪಿಸಿದ ಶಿಕ್ಷಣ ಸಂಸ್ಥೆಗಳು.
ಬೇರೆ ರಾಜ್ಯದಿಂದ ಕರ್ನಾಟಕ ಪ್ರವೇಶಿಸಬಹುದೆ? – ಬೊಮ್ಮಾಯಿ ಹೇಳಿಕೆ ಕೇಳಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ