Latest

ಶ್ರೀ ಸಿದ್ದಾಂತ ಶಿಖಾಮಣಿ-ಭಗವದ್ಗೀತಾ ಸಮನ್ವಯ ಗ್ರಂಥ ಲೋಕಾರ್ಪಣೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: 

ಬೆಂಗಳೂರಿನ ವಿಜಯನಗರದ ಬಸವೇಶ್ವರ  ಸುಜ್ಞಾನ ಮಠದಲ್ಲಿ ನಡೆದ ಇಷ್ಟಲಿಂಗ ಮಹಾ ಪೂಜಾ ಹಾಗೂ ಶ್ರೀ ಸಿದ್ದಾಂತ ಶಿಖಾಮಣಿ ಆಧ್ಯಾತ್ಮಿಕ ಆಶೀರ್ವಚನ ಸಮಾರಂಭದ 3ನೇ ದಿನವಾದ ಇಂದು  ಕೇಂದ್ರ ರೈಲ್ವೆ ರಾಜ್ಯ ಸಚಿವ ಸುರೇಶ ಅಂಗಡಿ  “ಶ್ರೀ ಸಿದ್ದಾಂತ ಶಿಖಾಮಣಿ-ಭಗವದ್ಗೀತಾ ಸಮನ್ವಯ “ಗ್ರಂಥವನ್ನು ಲೋಕಾರ್ಪಣೆ ಮಾಡಿದರು.

ಈ  ಸಂದರ್ಭದಲ್ಲಿ ಸಚಿವರು ಮಾತನಾಡಿ, ಮಕ್ಕಳಿಗೆ ಓದುವುದನ್ನ ರೂಢಿಸಬೇಕು. ಇಂದು ವಿದೇಶದಲ್ಲಿ  ಅಧ್ಯಯನ ಹೆಚ್ಚಾಗಿದೆ. ಆದರೆ ಬೆಂಗಳೂರಿನಂತಹ ನಗರದಲ್ಲಿ ಜನ ಮರೆಯುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.
 ಈ ಗ್ರಂಥವನ್ನ ಪ್ರಧಾನ ಮಂತ್ರಿಗಳಿಂದ ಬಿಡುಗಡೆ ಮಾಡಿಸುವುದಾಗಿ ಅವರು ಹೇಳಿದರು.
ಈ ಸಂದರ್ಭದಲ್ಲಿ ಸಚಿವ ಅಂಗಡಿ ದಂಪತಿಗೆ ಸಾನಿಧ್ಯವಹಿಸಿದ್ದ ಶ್ರೀಶೈಲ ಜಗದ್ಗುರುಗಳು, ಹುಕ್ಕೇರಿ ಮಠದ ಶ್ರೀ  ಚಂದ್ರಶೇಖರ ಸ್ವಾಮೀಜಿಗಳು, ವಿಭೂತಿಪುರಮಠದ ಸ್ವಾಮಿಗಳು ಹಾಗೂ ಉಪಸ್ಥಿತರಿದ್ದ ಎಲ್ಲಾ ಸ್ವಾಮೀಜಿ ಗಳು ಸತ್ಕಾರ ಮಾಡಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button