Latest

ಉಪಚುನಾವಣೆ ಪ್ರಚಾರದ ನಡುವೆ ಹೇಗಿದೆ ನೋಡಿ ಸಿದ್ದರಾಮಯ್ಯ ಜಿಮ್ ವರ್ಕೌಟ್

ಪ್ರಗತಿವಾಹಿನಿ ಸುದ್ದಿ; ಹುಬ್ಬಳ್ಳಿ: ಹಾನಗಲ್, ಸಿಂದಗಿ ಕ್ಷೇತ್ರಗಳ ಉಪಚುನಾವಣಾ ಅಖಾಡ ರಂಗೇರಿದ್ದು, ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮೂರು ಪಕ್ಷಗಳ ಭರ್ಜರಿ ಚುನಾವಣಾ ಪ್ರಚಾರ ಆರಂಭವಾಗಿದೆ. ಈ ನಡುವೆ ವಿಪಕ್ಷ ನಾಯಕ ಸಿದ್ದರಾಮಯ್ಯ ಜಿಮ್ ನಲ್ಲಿ ವರ್ಕೌಟ್ ಮಾಡಿ ದೇಹ ದಂಡಿಸಿ ಗಮನ ಸೆಳೆದಿದ್ದಾರೆ.

ಹುಬ್ಬಳ್ಳಿಯ ಏರ್ ಪೋರ್ಟ್ ಬಳಿ ಖಾಸಗಿ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿರುವ ಸಿದ್ದರಾಮಯ್ಯ ಇಂದು ಮುಂಜಾನೆ ಹೋಟೆಲ್ ಆವರಣದಲ್ಲಿ ವಾಕಿಂಗ್ ಮಾಡಿದರು. ಬಳಿಕ ಜಿಮ್ ನಲ್ಲಿ ವರ್ಕೌಟ್ ಮಾಡಿ ಬೆವರಿಳಿಸಿದರು. ಸಿದ್ದರಾಮಯ್ಯನವರಿಗೆ ಸ್ಥಳೀಯ ಕಾಂಗ್ರೆಸ್ ಮುಖಂಡರು ಸಾಥ್ ನೀಡಿದರು.

ಇಂದು ಸಿದ್ದರಾಮಯ್ಯ ಸಿಂದಗಿ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ.

ಪ್ಯಾಕೇಜಿಂಗ್ ಫ್ಯಾಕ್ಟರಿಯಲ್ಲಿ ಬೆಂಕಿ ದುರಂತ; ಇಬ್ಬರು ಸಜೀವದಹನ

Home add -Advt

Related Articles

Back to top button