*ಸಿಎಂ ಸಿದ್ದರಾಮಯ್ಯ ಜನತಾದರ್ಶನ ಆರಂಭ; ಜನರ ಅಹವಾಲು ಸ್ವೀಕರಿಸಿ, ಸಮಸ್ಯೆಗಳನ್ನು ತಕ್ಷಣ ಪರಿಹರಿಸಲು ಅಧಿಕಾರಿಗಳಿಗೆ ಸೂಚನೆ*
ಹರಿದು ಬಂದ ಜನಸಾಗರ
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಸಿಎಂ ಸಿದ್ದರಾಮಯ್ಯ ಅವರ ಮೊದಲ ಪೂರ್ಣಾವಧಿ ಜನತಾ ದರ್ಶನ ಆರಂಭವಾಗಿದ್ದು, ಗೃಹ ಕಚೇರಿ ಕೃಷ್ಣಾ ಬಳಿ ಜನಸಾಗರವೇ ಹರಿದುಬಂದಿದೆ.
ಅಹವಾಲುಗಳನ್ನು ಸ್ವೀಕರಿಸಲು ಒಟ್ಟು 20 ಕೌಂಟರುಗಳನ್ನು ಸ್ಥಾಪಿಸಲಾಗಿದ್ದು, ವಿಶೇಷ ಚೇತನರು ಮತ್ತು ಹಿರಿಯ ನಾಗರಿಕರಿಗೆ ಎರಡು ಪ್ರತ್ಯೇಕ ಕೌಂಟರ್ ಗಳನ್ನು ಮೀಸಲಿರಿಸಲಾಗಿದೆ. ಸಿಎಂ ಸಿದ್ದರಾಮಯ್ಯ ಜನರ ಬಳಿಗೆ ತೆರಳಿ ವಿಕಲಚೇತನರು, ಹಿರಿಯ ನಾಗರಿಕರು, ಪುಟ್ಟ ಮಕ್ಕಳ ಪೋಷಕರ ಸಮಸ್ಯೆಗಳನ್ನು ಆಲಿಸಿ ಅವರ ಅಹವಾಲು ಸ್ವೀಕರಿಸಿದ್ದಾರೆ.
ಸ್ಥಳದಲ್ಲಿ ಇದ್ದ ಅಧಿಕಾರಿಗಳಿಗೆ ಜನರ ಸಮಸ್ಯೆಗಳನ್ನು ತಕ್ಷಣ ಪರಿಹರಿಸುವಂತೆ ಸೂಚಿಸಿದ್ದಾರೆ. ಮನೆ, ನಿವೇಶನ, ಮಕ್ಕಳ ವಿದ್ಯಾಭ್ಯಾಸ, ವರ್ಗಾವಣೆ, ಮಕ್ಕಳ ಅನಾರೋಗ್ಯ, ಭೂಗಳ್ಳರ ಬೆದರಿಕೆ, ಒತ್ತುವರಿ ಸಮಸ್ಯೆ, ಕಿಡ್ನಿ, ಮೆದುಳು ಸಂಬಂಧಿತ ಸಮಸ್ಯೆ, ಕ್ಯಾನ್ಸರ್, ಉದ್ಯೋಗ ಸಮಸ್ಯೆ, ನಿಗಮ ಮಂಡಳಿ ನೇಮಕ, ಪಿಎಸ್ ಐ ಮರು ಪರೀಕ್ಷ ಅದಿನಾಂಕ ಮುಂದೂಡಿಕೆ ಸೇರಿದಂತೆ ನೂನಾರು ಸಮಸ್ಯೆಗಳನ್ನು ಜನರು ಹೊತ್ತು ತಂದಿದ್ದು, ಸಿಎಂ ಸಿದ್ದರಾಮಯ್ಯ ಖುದ್ದು ಜನರ ಬಳಿ ತೆರಳಿ ಸಮಸ್ಯೆ ಆಲಿಸಿ ಸಮಸ್ಯೆ ಸ್ವರೂಪಗಳಿಗೆ ತಕ್ಕಂತೆ ಪರಿಹಾರಕ್ಕೆ ಸೂಚಿಸುತ್ತಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ