ಪ್ರಗತಿವಾಹಿನಿ ಸುದ್ದಿ: ಯಾವುದಾದರೂ ಇಂಗ್ಲಿಷ್ ಪದಕ್ಕೆ ಕನ್ನಡದಲ್ಲಿ ಸೂಕ್ತ ಪದ ಇಲ್ಲದಿದ್ದರೆ ಅದನ್ನು ಇಂಗ್ಲಿಷ್ ನಲ್ಲೇ ಬಳಸಬೇಕು ಎಂದು ಕುವೆಂಪು ಹೇಳಿದಾರೆ ಗೊತ್ತಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು DC-CEO ಗಳ ಸಭೆಯಲ್ಲಿ ಪ್ರಸ್ತಾಪಿಸಿದ ಪ್ರಸಂಗ ನಡೆಯಿತು.
ಅಲ್ಪಸಂಖ್ಯಾತ ಇಲಾಖೆ ಚರ್ಚೆ ನಡೆಯುವ ಸಂದರ್ಭದಲ್ಲಿ ಕಾರ್ಯದರ್ಶಿ ಮನೋಜ್ ಜೈನ್ ಅವರು “ಇಂಡೀಕರಣ” ಪದ ಬಳಸಿದರು.
ಈ ವೇಳೆ ಮುಖ್ಯಮಂತ್ರಿಗಳು ಕುವೆಂಪು ಅವರ ಮಾತನ್ನು ಪ್ರಸ್ತಾಪಿಸಿ, ಇಂಡೀಕರಣ ಎಂದರೆ ಹೆಚ್ಚಿನವರಿಗೆ ಅರ್ಥ ಆಗುವುದಿಲ್ಲ. ಹೀಗಾಗಿ Mutation ಪದವನ್ನೇ ಬಳಸಿ ಎನ್ನುತ್ತಾ, “ಯಾವುದಾದರೂ ಇಂಗ್ಲಿಷ್ ಪದಕ್ಕೆ ಕನ್ನಡದಲ್ಲಿ ಸೂಕ್ತ ಪದ ಇಲ್ಲದಿದ್ದರೆ ಅದನ್ನು ಇಂಗ್ಲಿಷ್ ನಲ್ಲೇ ಬಳಸಬೇಕು ಎಂದು ಕುವೆಂಪು ಹೇಳಿದಾರೆ ಗೊತ್ತಾ” ಎಂದು ಕಿರು ಪಾಠ ಮಾಡಿದರು.
ಇಡೀ ಸಭೆ ಕುವೆಂಪು ಪಾಠವನ್ನು ಸಂಭ್ರಮಿಸಿತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ