Latest

*ಪ್ರವಾಹದ ನೀರಿನಲ್ಲಿ ಏಕಾಏಕಿ ಕೊಚ್ಚಿ ಹೋದ ಕಾರು; ಇಬ್ಬರು ಶಾಲಾ ಮಕ್ಕಳು ಸೇರಿ ಮೂವರು ಜಲಸಮಾಧಿ*

ಪ್ರಗತಿವಾಹಿನಿ ಸುದ್ದಿ: ಭಾರಿ ಮಳೆ, ಪ್ರವಾಹದ ಅಬ್ಬರಕ್ಕೆ ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಕಾರೊಂದು ನದಿ ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆ ಆಂಧ್ರಪ್ರದೇಶದ ಗುಂಟೂರಿನಲ್ಲಿ ನಡೆದಿದೆ.

ಧಾರಾಕಾರ ಮಳೆ, ನದಿಗಳು ಅಪಾಯದಲ್ಲಿ ಹರಿಯುತ್ತಿರುವುದರಿಂದ ಗುಂಟೂರಿನ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ದಾಗಲೇ ಶಾಲೆಗೆ ಹೋಗಿದ್ದ ಮಕ್ಕಳನ್ನು ತರಲೆಂದು ಹೋಗಿದ್ದ ಕಾರು ವಾಪಾಸ್ ಆಗುವಾಗ ಪ್ರವಾಹದ ನೀರಿನಲ್ಲಿ ಸಿಲುಕಿದೆ. ಏಕಾಏಕಿ ನದಿಯ ನೀರು ಪ್ರವಾದಂತೆ ಹರಿದ ಪರಿಣಾಮ ಕಾರು ನೀರಿನಲ್ಲಿ ಕೊಚ್ಚಿ ಹೋಗಿದೆ.

ಕಾರಿನಲ್ಲಿ ನೀರು ತುಂಬಿಕೊಂಡು ಹೊರಬರಲಾಗದೇ ಮೂವರು ಕಾರಿನಲ್ಲಿಯೇ ಸಾವನ್ನಪ್ಪಿದ್ದಾರೆ. ಇಬ್ಬರು ಶಾಲಾ ವಿದ್ಯಾರ್ಥಿಗಳು ಹಾಗೂ ಕಾರು ಚಾಲಕ ಮೃತ ಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಗುಂಟೂರಿನ ಪೆದಕಕಣಿ ಮಂಡಲದ ಉಪ್ಪಲಪಾಡು ಎಂಬಲ್ಲಿ ಈ ಘಟನೆ ನಡೆದಿದೆ. ಮೃತರನ್ನು ರಾಘವೇಂದ್ರ, ಸಾತ್ವಿಕ್ ಮತ್ತು ಮಾನ್ವಿತಾ ಎಂದು ಗುರುತಿಸಲಾಗಿದೆ.

Home add -Advt


Related Articles

Back to top button