Latest

*ಮತ್ತೆ ಗೊಂದಲದಲ್ಲಿ ಸಿದ್ದರಾಮಯ್ಯ; ರಾಹುಲ್ ಗಾಂಧಿ ನೀಡಿದ ಸಲಹೆಯೇನು? ಕೋಲಾರದಿಂದ ಹಿಂದೆ ಸರಿತಾರಾ ವಿಪಕ್ಷ ನಾಯಕ?*

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ವಿಧಾನಸಭಾ ಚುನಾವಣಾ ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಈ ನಡುವೆ ವಿಪಕ್ಷ ನಾಯಕ ಸಿದದ್ರಾಮಯ್ಯ ಮತ್ತೆ ಕ್ಷೇರ ಗೊಂದಲಕ್ಕೆ ಸಿಲುಕಿಕೊಂಡಿದ್ದಾರೆ.

ಕೋಲಾರದಿಂದ ಸ್ಪರ್ಧಿಸುವುದಾಗಿ ಘೋಷಿಸಿಸಿದ್ದ ಸಿದ್ದರಾಮಯ್ಯ, ಮತದಾರರನ್ನು ಸೆಳೆಯಲು ಭರ್ಜರಿ ರೋಡ್ ಶೋ, ಪ್ರಜಾಧ್ವನಿ ಯತರೆಯಲ್ಲಿ ಪಾಲ್ಗೊಂಡಿದ್ದರು. ಆದರೆ ಇದೀಗ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸುವುದು ಅನುಮಾನ ಎನ್ನಲಾಗಿದೆ.

ನಿನ್ನೆ ನಡೆದ ಸಿಇಸಿ ಸಭೆ ಬಳಿಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಿದ್ದರಾಮಯ್ಯ ಜೊತೆ ಪ್ರತ್ಯೇಕ ಚರ್ಚೆ ನಡೆಸಿದ್ದು, ಕೋಲಾರ ಸ್ಪರ್ಧೆ ನಿರ್ಧಾರದಿಂದ ಹಿಂದೆ ಸರಿಯುವಂತೆ ಸಲಹೆ ನೀಡಿದ್ದಾರೆ. ಹತ್ತು ನಿಮಿಷಗಳ ಕಾಲ ಮಾತುಕತೆ ನಡೆಸಿರುವ ರಾಹುಲ್ ಗಾಂಧಿ, ಸಿದ್ದರಾಮಯ್ಯನವರಿಗೆ ವರುಣಾದಿಂದ ಸ್ಪರ್ಧಿ ಎಂದು ಸೂಚಿಸಿದ್ದಾರೆ.

ರಾಹುಲ್ ಗಾಂಧಿ ಸಲಹೆಯಿಂದಾಗಿ ಇದೀಗ ಮತ್ತೆ ಸಿದ್ದರಾಮಯ್ಯ ಕ್ಷೇತ್ರದ ಗೊಂದಲದಲ್ಲಿದ್ದಾರೆ. ಇಂದು ಸಂಜೆ ವೇಳೆಗೆ ಸಿದ್ದರಾಮಯ್ಯ ಕೋಲಾರ ಸ್ಪರ್ಧೆ ಗೊಂದಲ ಅಂತ್ಯವಾಗುವ ಸಾಧ್ಯತೆ ಇದೆ.
Siddaramaiah,rahul gandhi,kolara,varuna

Home add -Advt

Related Articles

Back to top button