Latest

*ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ ಪ್ರಕರಣ: 10 ಜನರು ದುರ್ಮರಣ*

ನದಿಯಲ್ಲಿ ಕೊಚ್ಚಿ ಹೋಗಿದ್ದ ಗ್ಯಾಸ್ ಟ್ಯಾಂಕರ್ ಮೇಲಕ್ಕೆ


ಪ್ರಗತಿವಾಹಿನಿ ಸುದ್ದಿ: ಅಂಕೋಲಾ ತಾಲೂಕಿನ ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ ಪ್ರಕರಣದಲ್ಲಿ 10 ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಜುಲೈ 16ರಂದು ಗುಡ್ಡ ಕುಸಿತವಾಗಿತ್ತು. ದುರಂತದಲ್ಲಿ 10 ಜನರು ಸಾವನ್ನಪ್ಪಿದ್ದಾರೆ. 7 ಜನರ ಮೃತದೇಹಗಳು ಗಂಗಾವಳಿ ನದಿಯಲ್ಲಿ ಪತ್ತೆಯಾಗಿದೆ. ಕಣ್ಮರೆಯಾಗಿರುವ ಇನ್ನೂ ಮೂವರಿಗಾಗಿ ನದಿಯಲ್ಲಿ ಶೋಧಕಾರ್ಯ ಮುಂದುವರೆದಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

Home add -Advt

ಗುಡ್ಡ ಕುಸಿತದ ವೇಳೆ ಗಂಗಾವಳಿ ನದಿಗೆ ಉರುಳಿ ಬಿದ್ದಿದ್ದ ಗ್ಯಾಸ್ ಟ್ಯಾಂಕರ್ ನ್ನು ಇಂದು ಮುಂಜಾನೆ ಮೇಲಕೆತ್ತಲಾಗಿದೆ. ಶಿರೂರು ಹೆದ್ದಾರಿಯಲ್ಲಿ ಮಣ್ಣು ತೆರವು ಕಾರ್ಯಾಚರಣೆ ಐದನೇ ದಿನವಾದ ಇಂದೂ ಕೂಡ ಮುಂದುವರೆದಿದೆ. ಇನ್ನೊಂದೆಡೆ ನದಿಯಲ್ಲಿ ಕೊಚ್ಚಿ ಹೋದವರಿಗಾಗಿ ಗಂಗಾವಳಿ ನದಿಯಲ್ಲಿ ಶೋಧ ಕಾರ್ಯ ಕೂಡ ಬರದಿಂದ ಸಾಗಿದೆ.

Related Articles

Back to top button