ಪ್ರಗತಿವಾಹಿನಿ ಸುದ್ದಿ; ಹುಬ್ಬಳ್ಳಿ: ಸಾರ್ವಜನಿಕ ಹಣವನ್ನು, ಬ್ಯಾಂಕ್ ಹಣವನ್ನು ಲೂಟಿ ಹೊಡೆದವರನ್ನು ರಕ್ಷಣೆ ಮಾಡುತ್ತಿರುವವರು ಬಿಜೆಪಿಯವರು. ಅವರಿಗೆ ಶಿಕ್ಷೆ ಕೊಡುವ ಬದಲು ಸತ್ಯ ಮಾತಾಡಿದವರಿಗೆ ಶಿಕ್ಷೆ ಕೊಡುತ್ತಿದ್ದಾರೆ. ಇದು ಯಾವ ನ್ಯಾಯ? ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಸಂಸದೀಯ ಸ್ಥಾನದಿಂದ ಅನರ್ಹಗೊಳಿಸಿರುವುದನ್ನು ಖಂಡಿಸಿರುವ ಸಿದ್ದರಾಮಯ್ಯ, ಇದು ಪ್ರಜಾಪ್ರಭುತ್ವದ ಕಾರಾಳ ದಿನ. ಬಿಜೆಪಿ ನಾಯಕರು ಬೇರೆ ಪಕ್ಷದವರ ನಾಯಕರನ್ನು ಹೆದರಿಸಲು ಮಡಿರುವ ಷಡ್ಯಂತ್ರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ದೇಶದ ಬ್ಯಾಂಕ್ ಗಳನ್ನು ಕೊಳ್ಳೆ ಹೊಡೆದಂತ ವಿಜಯ್ ಮಲ್ಯ, ನೀರವ್ ಮೋದಿ, ಚೌಕ್ಸೆ ಎಲ್ಲರೂ ವಿದೇಶಕ್ಕೆ ಹೋದರು. ಅವರನ್ನೆಲ್ಲ ಏನಂತ ಕರೆಯಬೇಕು? ಸಾರ್ವಜನಿಕ ಹಣವನ್ನು ಕೊಳ್ಳೆ ಹೊಡೆದು ಹೋದವರನ್ನು ಏನೆಂದು ಕರೆಯಬೇಕು? ಹಾಗಾಗಿ ರಾಹುಲ್ ಗಾಂಧಿಯವರು ಕರೆದಿದ್ದು ತಪ್ಪಾ? ಬಿಜೆಪಿಯವರಿಗೆ ಸತ್ಯ ಹೇಳಬಾರದು ಸತ್ಯ ಹೇಳಿದ್ದಕ್ಕೆ ರಾಹುಲ್ ಗಾಂಧಿಯವರ ಸದಸ್ಯತ್ವವನ್ನು ಅನರ್ಹ ಮಾಡಿದ್ದಾರೆ. ಯಾವುದಾದರೂ ಮಾನನಷ್ಟ ಪ್ರಕರಣದಲ್ಲಿ 2 ವರ್ಷ ಜೈಲು ಶಿಕ್ಷೆಯಾದ ನಿದರ್ಶನಗಳಿವೆಯೇ? ಕೋರ್ಟ್ ಆದೇಶ ನೀಡಿದೆ. ಮೇಲ್ಮನವಿಗೆ ಅವಕಾಶಗಳಿವೆ. ಸುಪ್ರಿಂ ಕೋರ್ಟ್ ಇದೆ. ಅವಕಾಶಕ್ಕೂ ಮೊದಲೇ ಲೋಕಸಭಾ ಸದಸ್ಯತ್ವ ಅನರ್ಹ ಮಾಡಿದ್ದು ಬಿಜೆಪಿ ಕುತಂತ್ರ ಎಂದು ಕಿಡಿಕಾರಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ