Kannada NewsKarnataka NewsLatestPolitics

*ಸಂಘ ಪರಿವಾರ ಸುಳ್ಳಿನ ಕಾರ್ಖಾನೆ: ಸಿಎಂ ಸಿದ್ದರಾಮಯ್ಯ ವಾಗ್ದಾಳಿ*

ಪ್ರಗತಿವಾಹಿನಿ ಸುದ್ದಿ; ಗದಗ: ಬಿಜೆಪಿ ಸಂಘ ಪರಿವಾರದ ಎಬಿವಿಪಿ, ಬಜರಂಗ ದಳ, ಯುವ ಮೋರ್ಚಾ ಎಲ್ಲಾ ಸುಳ್ಳಿನ ಕಾರ್ಖಾನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಶಕ್ತಿ ಯೋಜನೆಯಿಂದ ತೊಂದರೆಯಾಗಿರುವ ಬಗ್ಗೆ ಮಾತನಾಡಿ ಎಬಿವಿಪಿ ಬಿಜೆಪಿಯ ವಿದ್ಯಾರ್ಥಿ ಸಂಘಟನೆಯಾಗಿದ್ದು, ಸುಳ್ಳು ಹೇಳುವುದೇ ಅವರ ಕೆಲಸ ಎಂದರು.

ಹಿಂದೂ ರಾಷ್ಟ್ರ ಬಿಜೆಪಿ ಸಿದ್ದಾಂತ
ಭಾರತ ಉಳಿಯಬೇಕೆಂದರೆ ಹಿಂದೂ ರಾಷ್ಟವಾಗಬೇಕು ಎಂದು ಪೇಜಾವರ ಶ್ರೀಗಳು ಹೇಳಿಕೆ ನೀಡಿರುವ ಬಗ್ಗೆ ಮಾತನಾಡಿ ಅದು ಬಿಜೆಪಿಯ ಘೋಷವಾಕ್ಯ. ಹಿಂದೂ ರಾಷ್ಟ್ರ ವಾಗಬೇಕೆಂದು ಜನಸಂಘ 1950ರಲ್ಲಿ ಪ್ರಾರಂಭವಾದಾಗಲೇ ಹೇಳಿದರು. ನಮ್ಮ ದೇಶದಲ್ಲಿ ಬರೀ ಹಿಂದೂಗಳಲ್ಲಿ ಕ್ರಿಶ್ಚಿಯನ್ , ಮುಸ್ಲಿಂ, ಜೈನರು, ಭೌದ್ಧರು ಇದ್ದಾರೆ. ನಮ್ಮ ದೇಶ ಬಹುತ್ವದ ದೇಶ. ಬರೀ ಹಿಂದುಗಳ ರಾಷ್ಟ್ರ ಮಾಡಿದರೆ ಆಗೋಲ್ಲ. ಅದು ಬಿಜೆಪಿಯ ಸಿದ್ದಾಂತ. ದೇಶವನ್ನು ಹಿಂದೂಗಳ ರಾಷ್ಟ್ರ ಮಾಡೋಕ್ಕೆ ಆಗೋಲ್ಲ ಎಂದರು. 1925 ರಲ್ಲಿ ಆರ್.ಎಸ್.ಎಸ್.ನ್ನು . ಹೆಗಡೆ ವಾರ್ ಸ್ಥಾಪನೆ ಮಾಡಿದ್ದರು. ಬಿಜೆಪಿ ಯವರಿಗೆ ಕೂಡ ಇದು ತಿಳಿದಿಲ್ಲ. ಸುಮ್ಮನೇ ಬುರುಡೆ ಹೊಡೆಯುತ್ತಾರೆ ಎಂದರು.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button