ಪ್ರಗತಿವಾಹಿನಿ ಸುದ್ದಿ: ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೆರವೇರಿದ ಅಭಿವೃದ್ಧಿ ಕಾಮಗಾರಿಗಳ ಶಿಲಾನ್ಯಾಸದ ಪಟ್ಟಿ ಹೀಗಿದೆ.
ರೂ.160.00 ಕೋಟಿ ವೆಚ್ಚದಲ್ಲಿ ನಿಡುಗುರ್ತಿ ಸೇರಿದಂತೆ 58 ಹಳ್ಳಿಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಕಾಮಗಾರಿಗೆ ಚಾಲನೆ.
ಸಂಡೂರು ಪಟ್ಟಣಕ್ಕೆ ಅಮೃತ 2.0 ಯೋಜನೆ ಅಡಿ ನಾರಿಹಳ್ಳ ಜಲಾಶಯದಿಂದ ಸುಧಾರಿತ ನೀರು ಸರಬರಾಜು ಯೋಜನೆ ಕೈಗೆತ್ತಿಕೊಳ್ಳುವ ಕಾಮಗಾರಿ ರೂ. 54.45 ಕೋಟಿ ವೆಚ್ಚದಲ್ಲಿ ಪ್ರಾರಂಭ
ಕನಕಭವನ ರೂ. 2.50 ಕೋಟಿ ವೆಚ್ಚದಲ್ಲಿ ನಿರ್ಮಾಣ ಕಾಮಗಾರಿ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ವೀರಶೈವ ಲಿಂಗಾಯತ, ವಿಶ್ವಕರ್ಮ, ಕುರುಬ, ಮೇದಾರ, ಯಾದವ, ಗೊಲ್ಲರು, ಮಡಿವಾಳ ಮತ್ತು ಮುಂತಾದ 13 ಸಮುದಾಯಗಳಿಗೆ ರೂ. 07.50 ಕೋಟಿ ವೆಚ್ಚದಲ್ಲಿ ಸಮುದಾಯ ಭವನಗಳ ನಿರ್ಮಾಣ.
ಚೋರನೂರು ಹೋಬಳಿಯ ಚೋರನೂರು ಗ್ರಾಮದಲ್ಲಿ ರೂ. 2.58 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಪೊಲೀಸ್ ಠಾಣೆ ನಿರ್ಮಾಣ.
ಸಂಡೂರು ಪಟ್ಟಣದಲ್ಲಿ 01 ಸೆಪ್ಟೆಂಬರ್ 2024 ರಿಂದ ಸ್ವತಂತ್ರವಾಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎ.ಪಿ.ಎಂ.ಸಿ) ಯಾಗಿ ಘೋಷಿಸಲಾಗಿದೆ.
ತೋರಣಗಲ್ಲು ಗ್ರಾಮದಲ್ಲಿ ಸರ್ಕಾರದ ಆದೇಶ ಸಂಖ್ಯೆ: 27-09-2024 ರ ಆದೇಶದನ್ವಯ ರೂ. 2.00 ಕೋಟಿ ವೆಚ್ಚದೊಂದಿಗೆ ಸ್ವತಂತ್ರ ಪದವಿ ಪೂರ್ವ ಕಾಲೇಜ್ ನ್ನು ಮಂಜೂರು ಮಾಡಲಾಗಿದೆ.
ಘೋಷಣೆಗಳು (ಅನುಮೋದನೆಯಾಗಿದ್ದು ಟೆಂಡರ್ ಹಂತದಲ್ಲಿವೆ).
ಸಂಡೂರು ಪಟ್ಟಣದಲ್ಲಿ 200 ಹಾಸಿಗೆಗಳ ಮಲ್ಟಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ರೂ. 180.00 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುವುದು.
ಸಂಡೂರು ತಾಲೂಕಿನ ಸಂಡೂರು ಪಟ್ಟಣ ಮತ್ತು ಡಿ.ಅಂತಾಪುರ ಗ್ರಾಮದಲ್ಲಿ ರೂ. 56.00 ಕೋಟಿ ವೆಚ್ಚದಲ್ಲಿ ವಿದ್ಯುತ್ ಉಪಕೇಂದ್ರಗಳನ್ನು ಮಾಡಿಕೊಡುತ್ತಿದ್ದೇವೆ.
ಸಂಡೂರು ಪಟ್ಟಣದ ಮಧ್ಯ ಭಾಗದಲ್ಲಿ ಸುಸಜ್ಜಿತವಾದ ಬಸ್ ನಿಲ್ದಾಣವನ್ನು ರೂ. 30.00 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುವುದು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ