Karnataka News

*ವಾಯುಭಾರ ಕುಸಿತ: ರಾಜ್ಯದ ಹಲವಡೆ ಮೋಡ ಕವಿದ ವಾತಾವರಣ*

ಪ್ರಗತಿವಾಹಿನಿ ಸುದ್ದಿ: ಕಾಸರಗೋಡು ಸೇರಿದಂತೆ ರಾಜ್ಯದ ದಕ್ಷಿಣ ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡು ಭಾಗಗಳಲ್ಲಿ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. 

ದಕ್ಷಿಣ ಕನ್ನಡ, ಉಡುಪಿ, ಹಾಸನ, ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ, ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆಗಳ ಅಲ್ಲಲ್ಲಿ ಸಣ್ಣ ಪ್ರಮಾಣದ ತುಂತುರು ಮಳೆಯ ಸಾಧ್ಯತೆಯೂ ಇದೆ. 

ಉತ್ತರ ಒಳನಾಡು ಭಾಗಗಳಲ್ಲಿ ಒಣ ಹವೆ ಮುಂದುವರಿಯಲಿದೆ. 

ಶ್ರೀಲಂಕಾ ಕರಾವಳಿಯಲ್ಲಿ ಬೀಡುಬಿಟ್ಟಿರುವ ವಾಯುಭಾರ ಕುಸಿತವು ತಮಿಳುನಾಡು ಕರಾವಳಿ ಮೂಲಕ ಉತ್ತರಕ್ಕೆ ಚಲಿಸುವ ವರದಿಗಳಿದ್ದರೂ, ಚಲಿಸುವ ಪಥದ ನಿಖರತೆ ಇನ್ನೂ ಸ್ಪಷ್ಟವಾಗಿಲ್ಲ. ಕೆಲವು ವರದಿಗಳು ತಮಿಳುನಾಡು ಕರಾವಳಿ ಅಪ್ಪಳಿಸುವ ಸಾಧ್ಯತೆಯನ್ನು ತೋರಿಸುತ್ತಿವೆ.

Home add -Advt

ಹಾಗೇನಾದರೂ ಸಂಭವಿಸಿದರೆ ಕರ್ನಾಟಕದ ದಕ್ಷಿಣ ಒಳನಾಡು, ಮಲೆನಾಡು ಹಾಗೂ ಕರಾವಳಿ ಭಾಗಗಳಲ್ಲಿ ಮುಂದಿನ ವಾರ ಮಳೆಯಾಗುವ ಸಾಧ್ಯತೆಗಳಿವೆ. 

ಈಗಿನಂತೆ ನವೆಂಬರ್ 29ರಿಂದ ದಕ್ಷಿಣ ಒಳನಾಡು ಹಾಗೂ 30ರಿಂದ ಮಲೆನಾಡು ಮತ್ತು ಕರಾವಳಿ ಭಾಗಗಳಲ್ಲಿ ಮಳೆ ಆರಂಭವಾಗುವ ಮುನ್ಸೂಚನೆ ಇದೆ. ಈ ಮಳೆಯು ಒಂದು ವಾರದ ಕಾಲ ಇರಬಹುದೆಂದು ಮುನ್ಸೂಚನಾ ನಕ್ಷೆಗಳು ತೋರಿಸುತ್ತವೆ. ಕಾದು ನೋಡಬೇಕಾಗಿದೆ.

Related Articles

Back to top button