Kannada NewsKarnataka NewsLatestPolitics
*ಬಿಜೆಪಿಯವರು ಪ್ರಜಾಪ್ರಭುತ್ವದ ವಿರೋಧಿಗಳು; ಡೆಪ್ಯೂಟಿ ಸ್ಪೀಕರ್ ಮೇಲೆ ಕಾಗದ ಎಸೆಯುವುದು ಅನಾಗರಿಕತೆ; ಸದನದಲ್ಲಿ ಸಿಎಂ ಸಿದ್ದರಾಮಯ್ಯ ಆಕ್ರೋಶ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಿಧಾನಸಭೆಯಲ್ಲಿ ಡೆಪ್ಯೂಟಿ ಸ್ಪೀಕರ್ ಮೇಲೆ ಬಿಜೆಪಿ ಶಾಸಕರು ಕಾಗದ ಹರಿದು ಎಸೆದಿರುವುದರ ಬಗ್ಗೆ ಪ್ರಸ್ತಾಪಿಸಿದ ಸಿಎಂ ಸಿದ್ದರಾಮಯ್ಯ, ಬಿಜೆಪಿಯವರು ಪ್ರಜಾಪ್ರಭುತ್ವ ವಿರೋಧಿಗಳು ಎಂದು ಗುಡುಗಿದ್ದಾರೆ.
ವಿಧಾನಸಭೆಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಸದನದಲ್ಲಿ ನಿನ್ನೆ ಬಿಜೆಪಿ ಸದಸ್ಯರು ನಡೆದುಕೊಂಡ ರೀತಿಯನ್ನು ಏನಂತ ಕರಿಬೇಕು? ನಾನೆಂದೂ ಇಂತಹ ಅನಾಗರಿಕ ವರ್ತನೆ ನೋಡಿಲ್ಲ. ಬಿಜೆಪಿಯವರು ನಡೆದುಕೊಂಡ ರೀತಿ ಅನಾಗರಿಕ ವರ್ತನೆ ಅಲ್ಲವೇ? ಎಂದು ಪ್ರಶ್ನಿಸಿದರು.
ಪಾಪ, ವಿಧಾನಸಭೆ ಡೆಪ್ಯೂಟಿ ಸ್ಪೀಕರ್ ಮುಖವೇ ಸಪ್ಪೆಯಾಗಿ ಹೋಗಿದೆ. ಯೋಚಿಸಬೇಡಿ ನಾವು ನಿಮ್ಮ ಜೊತೆ ಇದ್ದೇವೆ. ಒಂದು ವೇಳೆ ಮಾರ್ಷಲ್ ಇಲ್ಲದಿದ್ದರೆ ಡೆಪ್ಯೂಟಿ ಸ್ಪೀಕರ್ ಮೇಲೆಯೇ ಹಲ್ಲೆ ಮಾಡುತ್ತಿದ್ದರೇನೋ? ಎಂದರು.
ಬೆಂಗಳೂರಿನಲ್ಲಿ ನಡೆದ ವಿಪಕ್ಷ ನಾಯಕರ ಸಭೆಯಿಂದ ಬಿಜೆಪಿಯವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಇಂಡಿಯಾ ಹೆಸರಲ್ಲಿ ಒಂದಾಗಿದ್ದನು ಕಂಡು ಸಹಿಸದೇ ಕ್ಯಾತೆ ತೆಗೆದಿದ್ದಾರೆ ಎಂದು ವಾಗ್ದಾಳಿ ನಡೆಸಿದರು.