*ಸಿದ್ಧಾಂತ ಶಿಖಾಮಣಿ ಗ್ರಂಥ ಅದು ರಾಷ್ಟ್ರೀಯ ಗ್ರಂಥ: ಬೆಳಗಾವಿ ಹುಕ್ಕೇರಿ ಶ್ರೀಗಳು*

ಪ್ರಗತಿವಾಹಿನಿ ಸುದ್ದಿ: ಶ್ರೀ ಸಿದ್ಧಾಂತ ಶಿಖಾಮಣಿ ಇವತ್ತು ರಾಷ್ಟ್ರೀಯ ಗ್ರಂಥವಾಗಿದೆ. 18 ಭಾಷೆಗಳಲ್ಲಿ ಲಭ್ಯವಿರುವ ಮಹಾನ್ ಗ್ರಂಥ ಶ್ರೀ ಸಿದ್ಧಾಂತ ಶಿಖಾಮಣಿ. ಸಿದ್ಧಾಂತ ಶಿಖಾಮಣಿಯನ್ನು ಅಧ್ಯಯನ ಮಾಡಿದರೆ ವೀರಶೈವ ಧರ್ಮದ 101 ಸ್ಥಳಗಳನ್ನು ಕ್ರಮಬದ್ಧವಾಗಿ ಅಧ್ಯಯನ ಮಾಡಬಹುದು ಎಂದು ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಅವರು ಭಾನುವಾರತಿರುಪತಿ ರಾಷ್ಟ್ರೀಯ ವಿಶ್ವವಿದ್ಯಾಲಯದಲ್ಲಿ ಜರುಗಿದ ಅಂತರಾಷ್ಟ್ರೀಯ ಶಕ್ತಿ ವಿಶಿಷ್ಟಾದ್ವೈತ ಸಂಕೀರ್ಣದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಅಖಿಲ್ ಭಾರತ ಶಿವಾಚಾರ್ಯ ಸಂಸ್ಥೆ ಹಾಗೂ ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯ ಮೂರು ದಿನಗಳ ವರೆಗೆ ಅಂತರಾಷ್ಟ್ರೀಯ ಶಕ್ತಿ ವಿಶಿಷ್ಟಾದ್ವೈತ ರಹಿತ ವಿಚಾರ ಸಂಕೀರ್ಣ ಏರ್ಪಡಿಸಿರುವುದು ಅಭಿನಂದನೀಯ. ತಿರುಪತಿ ರಾಷ್ಟ್ರೀಯ ವಿಶ್ವವಿದ್ಯಾಲಯದಲ್ಲಿ ವೀರಶೈವ ಧರ್ಮ ಸಿದ್ಧಾಂತದ ಅಧ್ಯಯನ ಪೀಠ ಆರಂಭಿಸುವ ವಿಚಾರ ನಮಗೆ ಅತೀವ ಸಂತೋಷ ತಂದಿದೆ ಎಂದರು.
ಇದೇ ಸಂದರ್ಭದಲ್ಲಿ ಶ್ರೀಶೈಲ್ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾದ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಶಕ್ತಿ ವಿಶಿಷ್ಟಾದ್ವೈತ ಸಿದ್ಧಾಂತದಲ್ಲಿ ಅಷ್ಟಾವರಣ, ಷಟಸ್ಥಲ, ಪಂಚಾಚಾರಗಳು ಇವೆ. ಇವುಗಳನ್ನು ಅಧ್ಯನ ಮಾಡುವುದರಿಂದ ವೀರಶೈವ ಸಿದ್ಧಾಂತವನ್ನು ಅಧ್ಯಯನ ಮಾಡಿದಷ್ಟು ವೀರಶೈವ ಸಿದ್ಧಾಂತ ಅಧ್ಯಯನ ಮಾಡಿದ ಹಾಗೆ ಆಗುತ್ತದೆ ಎಂದರು.
ಕಾಶಿ ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವಾರಾದ್ಯ ಭಗವತ್ ಪಾದರು ಮಾತನಾಡಿ, ನಾವು ಇದೇ ವಿಶ್ವವಿದ್ಯಾಲಯಲ್ಲಿ ಅಧ್ಯನ ಮಾಡಿದ್ದೇವೆ. ಇವತ್ತು ಕಾಶಿಪೀಠಕ್ಕೆ ಜಗದ್ಗುರುಗಳಾಗಿ ಮತ್ತೆ ಇಲ್ಲಿ ಬಂದು ಅಧ್ಯಯನ ಪೀಠ ಆರಂಭಿಸಲು ನಮಗೆ ಅತೀವ ಸಂತೋಷವಾಗುತ್ತಿದೆ ಎಂದರು.
ಅಂತಾರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯ ಕುಲಪತಿ ಆಚಾರ್ಯ ಜಿ.ಎಸ್. ಕೃಷ್ಣಮೂರ್ತಿ ಮಾತನಾಡಿ, ಇವತ್ತು ವೀರಶೈವ ಸಿದ್ಧಾಂತ ಓದುವ 60 ಜನರು ಓದುತ್ತಿರುವುದು ಸಂತೋಷ ತಂದಿದೆ ಎಂದರು.
ಅಂತಾರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಮುಖ್ಯಸ್ಥ ಕೆ.ಗಣಪತಿ ಭಟ್ ಮಾತನಾಡಿ, ವೀರಶೈವ ಸಿದ್ಧಾಂತ ವೈಶಿಷ್ಟ್ಯ ವಾಗಿರುವುದು ಎಂದರು.
ಕಾರ್ಯಕ್ರಮದಲ್ಲಿ ಸಿಂದಗಿ ಸಾರಂಗ ಮಠದ ಡಾ.ಪ್ರಭು ಸಾರಂಗ ದೇವ ಶಿವಾಚಾರ್ಯ, ಸ್ವಾಮೀಜಿ ಸಿದ್ದಂಗಿ ಮಠದ ಉತ್ತರಾಧಿಕಾರಿ ಡಾ. ವಿಶ್ವಪ್ರಭು ದೇವ ಶಿವಾಚಾರ್ಯ ಸ್ವಾಮೀಜಿ, ಕೆರೂರು ಚರಂತಿಮಠದ ಡಾ. ಶಿವಕುಮಾರ ಸ್ವಾಮೀಜಿ, ಬೆಂಗಳೂರು ವಿಭೂತಿ ಮಠದ ಡಾ. ಮಹಾಂತಲಿಂಗ ಸ್ವಾಮೀಜಿ, ನಾಗನಸೂರು ಹಿರೇಮಠ ಶ್ರೀಕಂಠ ಸ್ವಾಮೀಜಿ, ಶಹಾಪುರ ಹಿರೇಮಠ ಸ್ವಾಮೀಜಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ