Kannada NewsKarnataka News

ಸಿದ್ಧೇಶ್ವರ ಸ್ವಾಮಿಗಳಿಗೆ ಎಸಿಪಿಆರ್ ಜೊತೆಗೆ ಅವಿನಾಭಾವ ಸಂಬಂಧವಿತ್ತು – ಜಿರಲಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ವಿಜಯಪುರದ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮಿಗಳಿಗೂ ಬೆಳಗಾವಿಯ ಎಸಿಪಿಆರ್ ಸಂಸ್ಥೆಗೂ ಅವಿನಾಭಾವ ಸಂಬಂಧವಿತ್ತು ಎಂದು  ಎಸಿಪಿಆರ್ ಕಾರ್ಯದರ್ಶಿ, ನ್ಯಾಯವಾದಿ ಎಂ.ಬಿ.ಜಿರಲಿ ಸ್ಮಿರಿಸಿದರು.

ಬುಧವಾರ ಸಂಜೆ ಗುರುದೇವ ರಾಮನಡೆ ಮಂದಿರದಲ್ಲಿ ನಡೆದ ಸ್ವಾಮಿಜಿಗಳ ಸಂಸ್ಮರಣೆ ಸಭೆಯಲ್ಲಿ ಅವರು ಮಾತನಾಡಿದರು.

ಶ್ರೀ ಗುರುದೇವ ರಾನಡೆಯವರ ಚಿಂತನೆ ವಿಶ್ವಮಟ್ಟಕ್ಕೆ ಮುಟ್ಟಬೇಕು ಎಂಬುವುದು ಅವರ ಆಶಯವಾಗಿತ್ತು. ನಮ್ಮ ಎಲ್ಲಾ ಚಟುವಟಿಕೆಗಳಿಗೆ ಅವರ ಆರ್ಶಿವಾದ ಇದ್ದೇ ಇತ್ತು ಮತ್ತು ನಮ್ಮ ಪುಸ್ತಕ ಪ್ರಕಟನೆಗಳಿಗೆ ಮಹಾಸ್ವಾಮಿಗಳು ಸೂಚನೆಕೊಟ್ಟಂತೆ ನಾವು ಕಾರ್ಯ ನಿರ್ವಹಿಸುತ್ತದ್ದೆವು ಎಂದರು.

ಎಸಿಪಿಆರ್ ಚೇರಮನ್ ಅಶೋಕ ಪೋತದಾರ, ಶ್ರೀಗಳು ಪ್ರಾರಂಭಿಕ ದಿನಗಳಲ್ಲಿ ಶ್ರೀಗುರುದೇವ ಮಂದಿರದಿಂದ ತಮ್ಮ ಪ್ರವಚನಗಳನ್ನು ಪ್ರಾರಂಭಿಸಿದ್ದನ್ನು ಸ್ಮರಿಸಿಕೊಂಡರು.

Home add -Advt

ಚಿಂತಕ ಶಾಹೀದ್ ಮೆಮೊನ್, ಸಾವಿರಾರು ಜನರ ಜೀವನವನ್ನು ಪರಿವರ್ತಿಸಿದವರು ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು. ಜಗತ್ತಿಗೆ ಪ್ರೇಮವನ್ನು ಹಂಚಿದರು ಮತ್ತು ಸರ್ವಧರ್ಮ ಸಮಭಾವನ್ನು ತಿಳಿಸಿಕೊಟ್ಟಿದ್ದರು ಎಂದರು.

ಚಾರ್ಟರ್ಡ್ ಅಕೌಂಟಂಟ್ ಕೃಷ್ಣ ಕೇಳ್ಕರ,  ಆತ್ಮಜ್ಞಾನ ಸಾಧನೆಗಾಗಿ ನರಜನ್ಮ ಎನ್ನುವ ಯತಿ ಮಹರಾಜರ ಮಾತಿನಂತೆ ಶ್ರೀ ಸಿದ್ದೇಶ್ವರ ಮಾಹಾಸ್ವಾಮಿಗಳಿದ್ದರು ಎಂದರು.

ಶೈಲಾ ಪಾಟೀಲ, ಶ್ರೀ ಸಿದ್ದೇಶ್ವರ ಸ್ವಾಮೀಜಿ ಮತ್ತು ಶ್ರೀ ಗುರುದೇವರ ಮಧ್ಯೆ ಬಹಳ ಸಾಮ್ಯ ಇದೆ. ಇಬ್ಬರ ಜೀವನವೂ ಒಂದೇ ರೀತಿಯಾಗಿ ಕಾಣುತ್ತದೆ. ಶ್ರೀ ಗುರುದೇವರು ವಿವರಿಸಿದ ಸಂತರ ರೀತಿಯಲ್ಲಿ ಶ್ರೀ ಸಿದ್ಧೇಶ್ವರ ಸ್ವಾಮಿಗಳು ಬದುಕಿದವರು ಎಂದರು.

ಡಾ. ಮಧುಮತಿ ಕುಲಕರ್ಣಿ, ಮಹಾತ್ಮರೆಲ್ಲರೂ ಮಾನವಾತೀತರು. ಅಂತೆಯೇ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳು ಎಂದರು.

ಡಾ. ಲಕ್ಷ್ಮೀ ದೇಶಪಾಂಡೆ ಗುರು ನಮನವನ್ನು ಪ್ರಸ್ತುತಪಡಿಸಿದರು. ಸುಬ್ರಹ್ಮಣ್ಯ ಭಟ್ ಕಾರ್ಯಕ್ರಮ ನಿರೂಪಿಸಿದರು.

ಇಂದು ಸಂಜೆ ಶ್ರೀ ಸಿದ್ದೇಶ್ವರ ಸ್ವಾಮಿಗಳ ಸಂಸ್ಮರಣ ಸಭೆ

https://pragati.taskdun.com/memorial-meeting-of-shri-siddeshwar-swami-this-evening/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button