Kannada NewsKarnataka NewsLatest

ಬಿದ್ದು ಗಾಯಗೊಂಡ ಸಿದ್ಧೇಶ್ವರ ಸ್ವಾಮೀಜಿ; ಆಸ್ಪತ್ರೆಗೆ ದಾಖಲು

 ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ – ವಿಜಯಪುರದ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ಬಾತ್ ರೂಂ ನಲ್ಲಿ ಬಿದ್ದಿದ್ದು, ಕಾಲಿಗೆ ಗಾಯವಾಗಿದೆ.

ಚಿಕ್ಕೋಡಿ ತಾಲೂಕಿನ ಕೇರೂರು‌ ಗ್ರಾಮದಲ್ಲಿ ಸೋಮವಾರ ಸಂಜೆ 6 ಗಂಟೆ ಹೊತ್ತಿಗೆ ಘಟನೆ ನಡೆದಿದೆ.

ಕೇರೂರ ಗ್ರಾಮಕ್ಕೆ ಪ್ರವಚನ ನೀಡಲು ಸಿದ್ದೇಶ್ವರ ‌ಸ್ವಾಮೀಜಿ ಆಗಮಿಸಿದ್ದರು. ಇಂದೇ ಪ್ರವಚನ ಕಾರ್ಯಕ್ರಮದ ಉದ್ಘಾಟನೆ ಇತ್ತು. ಭಕ್ತರೊಬ್ಬರ ಫಾರ್ಮ್ ಹೌಸ್ ನಲ್ಲಿ ಸ್ವಾಮೀಜಿ ವಾಸ್ತವ್ಯ ಹೂಡಿದ್ದರು.

ಸಂಜೆ ಬಾತ್ ರೂಂ ಗೆ ಹೊಗಿದ್ದ ಸಂದರ್ಭದಲ್ಲಿ ಅವರು ಆಯತಪ್ಪಿ ಬಿದ್ದರು. ಘಟನೆಯಲ್ಲಿ ಸಿದ್ದೇಶ್ವರ ಸ್ವಾಮೀಜಿ ಕಾಲಿಗೆ ಗಂಭೀರ ಗಾಯವಾಗಿದ್ದು, ಫ್ಯಾಕ್ಚರ್ ಆಗಿದೆ. ಸ್ವಾಮೀಜಿಯವರನ್ನು ಚಿಕಿತ್ಸೆಗಾಗಿ ಕನ್ಹೇರಿ ಮಠದ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿದೆ.

Home add -Advt

ಆಸ್ಪತ್ರೆಯಲ್ಲಿ ಸ್ಕ್ಯಾನ್ ಮಾಡಿ ನೋಡಿದ ನಂತರ ಸ್ಪಷ್ಟ ಚಿತ್ರಣ ಗೊತ್ತಾಗಲಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಕೊರೋನಾ

Related Articles

Back to top button