Latest

ಪಾರಂಪರಿಕ ಕ್ಲಬ್ ನಲ್ಲಿ ಬೆಂಕಿ ದುರಂತ; 144 ವರ್ಷಗಳ ಹಳೇ ಕಟ್ಟಡ ಸುಟ್ಟು ಭಸ್ಮ

ಪ್ರಗತಿವಾಹಿನಿ ಸುದ್ದಿ; ಹೈದರಾಬಾದ್: ದೇಶದ ಹಳೇ ಕ್ಲಬ್ ಗಳಲ್ಲಿ ಒಂದಾದ ಸಿಕಂದರಾಬಾದ್ ಕ್ಲಬ್ ನಲ್ಲಿ ಭಾರಿ ಬೆಂಕಿ ಅವಘಡ ಸಂಭವಿಸಿದ್ದು, 144 ವರ್ಷಗಳ ಹಳೇಯ ಕಟ್ಟಡ ಸುಟ್ಟು ಕರಕಲಾಗಿದೆ.

ಇಂದು ಮುಂಜಾನೆ 3 ಗಂಟೆ ಸಮಾದಲ್ಲಿ ಈ ಬೆಂಕಿ ಅವಘಡ ಸಂಭವಿಸಿದ್ದು, ವಿಷಯ ತಿಳಿಯುತ್ತಿದ್ದಂತೆ 10 ಅಗ್ನಿಶಾಮಕ ವಾಹನದೊಂದಿದೆ ಸ್ಥಳಕ್ಕೆ ದೌಡಾಯಿಸಿ ಕಾರ್ಯಾಚರಣೆ ನಡೆಸಿದೆವು. ಬೆಂಕಿ ನಂದಿಸಲು 3-4 ಗಂಟೆ ಬೇಕಾಯಿತು. ಇಡೀ ಕ್ಲದ್ ಸುಟ್ಟು ಭಸ್ಮವಾಗಿದೆ ಎಂದು ಅಗ್ನಿಶಾಮಕ ಅಧಿಕಾರಿ ತಿಳಿಸಿದ್ದಾರೆ.

ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ನಿನ್ನೆ ಕ್ಲಬ್ ಮುಚ್ಚಲಾಗಿತ್ತು. ಇಂದು ಮುಂಜಾನೆ ವೇಳೆಗೆ ಅವಘಡ ಸಂಭವಿಸಿದೆ. ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಸಂಭವಿಸಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಳಗಾವಿ ಮಾರುಕಟ್ಟೆಯಲ್ಲಿ ಕೋವಿಡ್ ರೂಲ್ಸ್ ಬ್ರೇಕ್; ವೀಕೆಂಡ್ ಕರ್ಫ್ಯೂಗೂ ಡೋಂಟ್ ಕೇರ್

Home add -Advt

Related Articles

Back to top button