Belagavi NewsBelgaum NewsKannada NewsKarnataka News

ಕೆಎಲ್ಎಸ್ ಜಿಐಟಿ ಆರ್ಕಿಟೆಕ್ಚರ್ ವಿಭಾಗದಿಂದ ರಜತ ಮಹೋತ್ಸವ ಆಚರಣೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಕೆಎಲ್ಎಸ್ ಜಿಆಯ್ ಟಿಯ ಆರ್ಕಿಟೆಕ್ಚರ್ (ವಾಸ್ತುಶಿಲ್ಪ) ವಿಭಾಗವು 25 ವರ್ಷಗಳ ಸಂಭ್ರಮಾಚರಣೆಯನ್ನು ಇದೆ ಜನವರಿ 12 ರಂದು ರೆಸೊನಾನ್ಸ್ – ಪ್ರತಿಧ್ವನಿ ಎಂಬ ವಿಶಿಷ್ಟ ಕಾರ್ಯಕ್ರಮದೊಂದಿಗೆ ಆಚರಿಸಿತು.

ಮುಖ್ಯ ಅತಿಥಿಯಾಗಿ ಆಗಮಿಸಿದ,  ಅಬಿನ್ ಡಿಸೈನ್ ಸ್ಟುಡಿಯೋ – ಇಂಡಿಯಾದ ಸಂಸ್ಥಾಪಕ ಮತ್ತು ಪ್ರಧಾನ ವಾಸ್ತುಶಿಲ್ಪಿ,. ಕೋಲ್ಕತ್ತಾ ಅಬಿನ್ ಚೌಧುರಿ, ಅವರು ಭವಿಷ್ಯದ ಕಟ್ಟಡಗಳ ನಿರ್ಮಾಣ ಹಾಗೂ ಅವುಗಳ ವಾಸ್ತು ವಿನ್ಯಾಸದ ಮಹತ್ವದ ಬಗ್ಗೆ ಮಾತನಾಡಿದರು.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆರ್ಕಿಟೆಕ್ಟ್ಸ್ (ಐಐಎ), ಕರ್ನಾಟಕ ವಲಯದ ಅಧ್ಯಕ್ಷರು, ವಾಸ್ತುಶಿಲ್ಪಿ , ಮೋಹನ್ ಬಿ.ಆರ್. ಗೌರವ ಅತಿಥಿಗಳಾಗಿ ಭಾಗವಹಿಸಿದ್ದರು ಮತ್ತು ಈ ಸಂಧರ್ಭದಲ್ಲಿ ಮಾತನಾಡುತ್ತ ಹಾಗೂ ವಾಸ್ತುಶಿಲ್ಪ ಅತ್ಯಂತ ಪುರಾತನ ಕಲೆಯಾಗಿದ್ದು ,ಇದರಲ್ಲಿ ಆಧುನಿಕತೆ ಹಾಗೂ ಪುರಾತನ ಕಲೆಯ ಸಮ್ಮೇಳನ ಭವಿಷ್ಯಕ್ಕೆ ಉತ್ತಮ ಕಟ್ಟಡಗಳ ನಿರ್ಮಾಣದಲ್ಲಿ ಸಹಾಯಕ ವಾಗಲಿದೆ . ಇದೆ ಸಂಧರ್ಭದಲ್ಲಿ ಕೆ ಎಲ್ ಎಸ್ ಆರ್ಕಿಟೆಕ್ಚರ್ ವಿಭಾಗದ ಸಾಧನೆಯನ್ನು ಕೊಂಡಾಡಿದರು. ಆರ್ಕಿಟೆಕ್ಚರಲ್ ಕೋರ್ಸ್ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದ, ಪ್ರಬಂಧ ಪ್ರದರ್ಶನವನ್ನು ಮೋಹನ್ ಬಿ.ಆರ್ ಅವರು ಉದ್ಘಾಟಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಕರ್ನಾಟಕ ಲಾ ಸೊಸೈಟಿಯ ಅಧ್ಯಕ್ಷ ಅನಂತ್ ಮಂಡಗಿ ಅವರು ಈ ಮಹತ್ವದ ಮೈಲಿಗಲ್ಲನ್ನು ತಲುಪುವಲ್ಲಿ, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳ ಪ್ರಯತ್ನವನ್ನು ಶ್ಲಾಘಿಸಿದರು. ಅವರು ವಾಸ್ತುಶಿಲ್ಪದ ವಿಭಾಗದ ಭವಿಷ್ಯದ ಯೋಜನೆಗಳನ್ನು ವಿವರಿಸಿ, ಅದರ ಮುಂದುವರಿದ ಬೆಳವಣಿಗೆ ಮತ್ತು ನಾವೀನ್ಯತೆಗೆ ಬಗ್ಗೆ ಆಶಾವಾದವನ್ನು ವ್ಯಕ್ತಪಡಿಸಿದರು.

ವಿಭಾಗದ ಮುಖ್ಯಸ್ಥೆ ಡಾ. ರೂಪಾಲಿ .ಡಿ.ಕವಿಲ್ಕರ್ ವರದಿ ಮಂಡಿಸಿ ಆರ್ಕಿಟೆಕ್ಚರ್ ವಿಭಾಗದ 25 ವರ್ಷಗಳ ಪ್ರಯಾಣವನ್ನು ತಿಳಿಸಿದರು ಮತ್ತು ಎಲ್ಲರು ನೀಡಿದ ಸಹಕಾರವನ್ನು ಸ್ಮರಿಸಿದರು.

ಉದ್ಘಾಟನಾ ಕಾರ್ಯಕ್ರಮಕ್ಕೆ, ಕೆಎಲ್‌ಎಸ್ ಜಿಐಟಿ ಗವರ್ನಿಂಗ್ ಕೌನ್ಸಿಲ್ (ಎಂಎಎಂ), ಅಧ್ಯಕ್ಷರಾದ  ಪ್ರಮೋದ ಎನ್. ಕಥಾವಿ, ಮತ್ತು ಕೆಎಲ್‌ಎಸ್ ಜಿಐಟಿ, (ಇಂಜಿನಿಯರಿಂಗ್) ಅಧ್ಯಕ್ಷರಾದ  ರಾಜೇಂದ್ರ ಬೆಳಗಾಂವಕರ, ಕರ್ನಾಟಕ ಲಾ ಸೊಸೈಟಿಯ ಸದಸ್ಯರು ಉಪಸ್ಥಿತರಿದ್ದರು.

ಜನವರಿ 13 ರಂದು ಅಭಿನಂದನಾ ಸಮಾರಂಭ ಹಾಗೂ 25 ವರ್ಷಗಳ ಯಶಸ್ಸಿಗೆ ಶ್ರಮಿಸಿದ ಹಿರಿಯ ಅಧ್ಯಾಪಕರ ಗೌರವ ಸಮಾರಂಭ ಮತ್ತು 2023 ಬ್ಯಾಚ್ ನ ಆರ್ಕಿಟೆಕ್ಚರ್ ಪದವಿ ಪಡೆದ ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭ ನಡೆಯಲಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button