ಪ್ರಗತಿವಾಹಿನಿ ಸುದ್ದಿ, ಕಾರವಾರ : ಇಲ್ಲಿನ ಪೊಲೀರು ಏಕಕಾಲಕ್ಕೆ 20 ಓಸಿ ಅಡ್ಡೆಗಳ ಮೇಲೆ ದಾಳಿ ನಡೆಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಶಿವಪ್ರಕಾಶ್ ದೇವರಾಜ್ ನೇತೃತ್ವದ ತಂಡ ಕಾರವಾರ ತಾಲೂಕಿನಲ್ಲಿ 20 ಓಸಿ ಅಡ್ಡೆಗಳ ಮೇಲೆ ದಾಳಿ ನಡೆಸಿ 21 ಜನರನ್ನು ಬಂಧಿಸಿದೆ.
ಸುಮಾರು 60 ಪೊಲೀಸ್ ಸಿಬ್ಬಂದಿ ನೇತೃತ್ವದಲ್ಲಿ ಈ ದಾಳಿ ನಡೆದಿದ್ದು
ಅಂದಾಜು ಒಂದು ಲಕ್ಷ ರೂ,ಗಳಷ್ಟು ಹಣ ಹಾಗೂ ಇಪ್ಪತ್ತಕ್ಕೂ ಹೆಚ್ವು ಮೊಬೈಲ್ , ಓಸಿ ಚೀಟಿಗಳನ್ನು ವಶಕ್ಕೆ ಪಡೆದಿದ್ದಾರೆ.
ಘಟನೆ ಸಂಬಂಧ ಕಾರವಾರ ನಗರ ಹಾಗೂ ಚಿತ್ತಾಕುಲ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಈ ದಾಳಿಯಲ್ಲಿ 60 ಪೊಲೀಸರು ಭಾಗಿಯಾಗಿದ್ದು ಪ್ರೊಬೇಷನರಿ ಎಸ್ .ಪಿ ಕುಷಾಲ್ ಚೋಕ್ಸಿ , ಸಿಪಿಐ ಶರಣಗೌಡ ಪಾಟೀಲ್, ಕುಮಟಾ ಪಿ.ಎಸ್.ಐ, ಹೊನ್ನಾವರ ಪಿ.ಎಸ್.ಐ ಅಶೋಕ್ ಸೇರಿದಂತೆ 20 ಅಧಿಕಾರಿಗಳು ಹಾಗೂ 40 ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ