Latest

ಹೆಚ್ಚುವರಿ ಆದಾಯಕ್ಕಾಗಿ ಶೌಚಾಲಯ, ಮಹಡಿ ಸ್ವಚ್ಛತೆ ಕೆಲಸ ಮಾಡಿದ್ದರಂತೆ ಈ ಗಾಯಕ- ನಟ

ಪ್ರಗತಿವಾಹಿನಿ ಸುದ್ದಿ, ಮುಂಬೈ: ಹೆಚ್ಚುವರಿ ವೇತನ ಹೊಂದುವ ಸಲುವಾಗಿ ತಾವು ಶೌಚಾಲಯ ಸ್ವಚ್ಛತೆ, ಮಹಡಿ ಒರೆಸುವ ಕೆಲಸ ಮಾಡಿದ್ದಾಗಿ ಪಂಜಾಬಿ ಗಾಯಕ-ನಟ ಗಿಪ್ಪಿ ಗ್ರೆವಾಲ್ ಹೇಳಿಕೊಂಡಿದ್ದಾರೆ. 

” ನಾನು ಕೆನಡಾದಲ್ಲಿದ್ದಾಗ ಸ್ವಚ್ಛತಾ ಕೆಲಸ ಮಾಡುತ್ತಿದ್ದೆ. ಶೌಚಾಲಯ ಸ್ವಚ್ಛಗೊಳಿಸುವ ಕೆಲಸವೂ ಸಿಗುತ್ತಿತ್ತು. ಅನೇಕ ಬಾರಿ ಮಹಡಿ ಒರೆಸುವ ಕೆಲಸ ಕೂಡ ಮಾಡಬೇಕಾಗಿತ್ತು. ಅದಕ್ಕೆ ಹೆಚ್ಚುವರಿ ಕೂಲಿ ಸಿಗುತ್ತಿತ್ತು. ಅದನ್ನು ಪಡೆದು ಖುಷಿಯಿಂದ ಕೆಲಸ ಮಾಡುತ್ತಿದ್ದೆ ಎಂದು ಅವರು ಬಾಲಿವುಡ್ ಹಂಗಾಮಾ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಇದೇ ವೇಳೆ ಅವರು ತಮ್ಮ ಪತ್ನಿ ರವನೀತ್ ಕೌರ್ ಅವರೊಂದಿಗೆ ಪತ್ರಿಕೆಗಳನ್ನು ವಿತರಿಸುವ ಕೆಲಸ ಮಾಡುತ್ತಿದ್ದ ದಿನಗಳನ್ನೂ ಮೆಲುಕು ಹಾಕಿದ್ದಾರೆ.

“ಭಾರತದಲ್ಲಿ ಜನರು ಶೌಚಾಲಯಗಳನ್ನು ಸ್ವಚ್ಛಗೊಳಿಸುವ ಅಥವಾ ಅಂತಹುದೇ ಕೆಲಸವನ್ನು  ಕೀಳಾಗಿ ಕಾಣಲು ಕಲಿಸುತ್ತಾರೆ. ಶೌಚಾಲಯವನ್ನು ಸ್ವಚ್ಛಗೊಳಿಸುವುದು ಒಳ್ಳೆಯ ಕೆಲಸವಲ್ಲ, ಇದು ಒಂದು ಕೀಳು ಕೆಲಸ ಎಂಬಂತಹ ವಿಷಯಗಳನ್ನು ನಮಗೆ ಕಲಿಸುವುದು ನಮ್ಮ ದುರಾದೃಷ್ಟ” ಎಂದು ಸಹ ಗಿಪ್ಪಿ ಹೇಳಿದ್ದಾರೆ.

Home add -Advt

ಬಸ್ ಯಾತ್ರೆ ಬಗ್ಗೆ ಡಿ.ಕೆ.ಶಿವಕುಮಾರ್ ಸ್ಪಷ್ಟನೆ

Related Articles

Back to top button