ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: “ಸರ್, ದಯಮಾಡಿ ಈ SDMC ಗಳನ್ನು ರದ್ದು ಮಾಡಿ..” ಹೀಗೆಂದು ಶಿಕ್ಷಣಾಧಿಕಾರಿಯೆನ್ನಲಾದ ವ್ಯಕ್ತಿಯೊಬ್ಬರು ಶಿಕ್ಷಣ ಸಚಿವರನ್ನು ನಿವೇದಿಸುತ್ತಿರುವ ವಿಡಿಯೊವೊಂದು ವೈರಲ್ ಆಗಿದೆ.
“ಕೆಲವು SDMC ಸದಸ್ಯರು ಒಳ್ಳೆಯವರಿರಬಹುದು. ಆದರೆ ಶೇಕಡಾವಾರು ತಾಳೆ ಹಾಕಿದಾಗ ಹೆಚ್ಚಿನ SDMC ಸದಸ್ಯರು ಶಿಕ್ಷಕರೊಂದಿಗೆ ತೀರ ಕೆಟ್ಟ ರೀತಿಯಲ್ಲಿ ವರ್ತಿಸುತ್ತಾರೆ. ಶಿಕ್ಷಕರಿಗೆ ಕವಡೆ ಕಾಸಿನ ಕಿಮ್ಮತ್ತೂ ಇಲ್ಲ, ಸ್ವಾತಂತ್ರ್ಯವೂ ಇಲ್ಲ. ಶಾಲೆಗಳಲ್ಲಿ ಬಂದು ದೌರ್ಜನ್ಯ ಮಾಡುತ್ತಾರೆ, ಕೆಟ್ಟ ಮಾತುಗಳನ್ನಾಡುತ್ತಾರೆ,” ಎಂದು ಅವರು ಹೇಳಿದ್ದಾರೆ.
“ತಾವು ಗಮನಿಸಿದ ವಿಡಿಯೊವೊಂದರಲ್ಲಿ SDMC ಸದಸ್ಯನೊಬ್ಬ ಶಾಲೆಯ ಮುಖ್ಯಶಿಕ್ಷಕರೊಂದಿಗೆ ಮಾತನಾಡಿ ಹೇಳುತ್ತಾನೆ, ಆ ಶಾಲೆಯ ಶಿಕ್ಷಕಿಯೊಬ್ಬರು ಅವನ ಮನೆಗೆ ಹೋಗಬೇಕಂತೆ.. ಆತನನ್ನು ಕರೆಯಬೇಕಂತೆ.. ಆತ ಸೊಂಟದ ಕೆಳಗಿನ ಭಾಷೆ ಮಾತನಾಡುತ್ತಾನೆ. ನಾನು ಒಂದೇ ಶಾಲೆಯ ಬಗ್ಗೆ ಹೇಳುವುದಿಲ್ಲ, ಈ ಬಗ್ಗೆ ದಯಮಾಡಿ ಒಂದು ಮೌಲ್ಯಮಾಪನ ಮಾಡಿಸಿ ಯಾವ ಯಾವ ಶಾಲೆಗಳಲ್ಲಿ SDMCಗಳು ಹೇಗೆ ಕೆಲಸ ಮಾಡುತ್ತಿವೆ ಎಂದು ಕೇಳಿ, ಶಿಕ್ಷಕರ ವೈಯಕ್ತಿಕ ಅಳಲನ್ನು ಕೇಳಿ, ಅವರು ಯಾವ ರೀತಿಯ ದೌರ್ಜನ್ಯ ಎದುರಿಸುತ್ತಿದ್ದಾರೆ ಎಂಬುದನ್ನು ಆಲಿಸಿ, ಇದು ನನ್ನ ನಮೃತೆಯ ಪ್ರಾರ್ಥನೆ” ಎಂದು ಅವರು ಹೇಳಿದ್ದಾರೆ.
“ರಾಜ್ಯದ ಬೇರೆಬೇರೆ ಜಿಲ್ಲೆಗಳಲ್ಲಿ ಈ ಸಮಸ್ಯೆ ಇದ್ದು ನಮ್ಮ ಹೈದರಾಬಾದ್ ಕರ್ನಾಟಕ (ಕಲ್ಯಾಣ ಕರ್ನಾಟಕ) ಭಾಗದಲ್ಲಿ ಶಿಕ್ಷಕರು ಬಹಳ ಹಿಂಸೆ ಅನುಭವಿಸಿದ್ದಾರೆ. ಇದಕ್ಕಾಗಿ ಕಾನೂನು ತಿದ್ದುಪಡಿ ಮಾಡಿ ಶಿಕ್ಷಕರ ರಕ್ಷಣೆ ಮಾಡಿ” ಎಂದು ಅವರು ಸಚಿವರಲ್ಲಿ ಮೊರೆಯಿಟ್ಟಿದ್ದಾರೆ.
*ಗುಡುಗು, ಮಿಂಚು ಸಹಿತ ಮತ್ತೆ ಭಾರಿ ಮಳೆ ಎಚ್ಚರಿಕೆ*
https://pragati.taskdun.com/heavy-raintamilnaduimdalert/
ಬೆಂಕಿ ಅವಘಡ; ನಾಲ್ಕು ಅಂಗಡಿಗಳು ಭಸ್ಮ
https://pragati.taskdun.com/four-shops-burnt-down-in-fire-accident/
ರಾಷ್ಟ್ರೀಯ ಹಿರಿಯರ ಕುಸ್ತಿ ಚಾಂಪಿಯನ್ ಶಿಫ್; ರಾಜ್ಯಕ್ಕೆ ಎರಡು ಪದಕ
https://pragati.taskdun.com/national-senior-wrestling-championshipone-silverone-bronze-medalkarnataka/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ