Latest

ಶಿರಸಿಯ ದೇವಿಕೆರೆ ಈಗ ಆಕರ್ಷಣೆಯ ಕೇಂದ್ರ

ಪ್ರಗತಿವಾಹಿನಿ ಸುದ್ದಿ, ಶಿರಸಿ – ಶಿರಸಿ ನಗರದ ಮಧ್ಯಭಾಗದಲ್ಲಿ ದೇವಿಕೆರೆ ಇದೆ. ಹಲವು ವರ್ಷಗಳ ಹಿಂದೆ ಶಿರಸಿಯ ನಗರಸಭೆ ದೇವಿಕೆರೆಯ ಹೂಳನ್ನು ತೆಗೆದು ದೇವಿಕೆರೆಯಲ್ಲಿ ಹೆಚ್ಚಿನ ನೀರು ನಿಲ್ಲುವಂತೆ ಮಾಡಲಾಗಿತ್ತು. ಆನಂತರ ಪ್ರವಾಸೋದ್ಯಮ ಇಲಾಖೆ ಅನುದಾನದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ. ಅಭಿವೃದ್ಧಿ ಕಾರ್ಯ ಈಗ ಅಂತಿಮ ಹಂತ ತಲುಪುತ್ತಿದೆ.
ದೇವಿಕೆರೆಯ ಆಚೆಯ ದಡದಲ್ಲಿ ಗಣಪತಿ ಹಲವು ವರ್ಷಗಳಿಂದ ಕುಳಿತುಕೊಂಡಿದ್ದ. ದೇವಿಕೆರೆಯ ಭಾಗದ ಹಲವು ಯುವಕರು ಸೇರಿ ಈ ಗಣಪತಿಗೆ  ಹೊಸತನ, ಹೊಸ ಮೆರಗು ಹಾಗೂ ದೇವಿಕೆರೆಯ ಆಕರ್ಷಣೆ ಹೆಚ್ಚುವಂತೆ ಮಾಡಿದ್ದಾರೆ.
ಅಲ್ಲದೆ ದೇವಿಕೆರೆಯಿಂದ ಮುಂದೆ ಹೋಗುವ ಸಾರ್ವಜನಿಕರು ತಪ್ಪದೇ ನಿಂತು ಕೈಮುಗಿದು ಮುಂದಿನ ಕೆಲಸ  ನಿರ್ವಿಘ್ನದಿಂದ ಸಾಗಲಿ ಎಂಬ ಭಾವನೆಯಿಂದ ನಮಸ್ಕರಿಸಿ ಹೋಗುವುದು ಸಾಮಾನ್ಯವಾಗಿದೆ.
 ಅಲ್ಲದೆ ದೇವಿಕೆರೆಯ ಸುತ್ತಲೂ ಮುಂಜಾನೆಯ ವಾಯುವಿಹಾರಕ್ಕೆ ಅತ್ಯಂತ ಉತ್ತಮ ಸ್ಥಳವಾಗಿದೆ.
ಶಿರಸಿಯ ದೇವಿಕೆರೆ ಐತಿಹಾಸಿಕ ಮಹತ್ವವನ್ನು ಹೊಂದಿದೆ. ಕೆಲವರ ಮಾಹಿತಿಯಂತೆ ಶಿರಸಿಯ ಶ್ರೀ ಮಾರಿಕಾಂಬಾ ದೇವಿಯ ಮೂರ್ತಿ ದೇವಿಕೆರೆಯಲ್ಲಿ ನಾಡಿಗ್ ಕುಟುಂಬದವರಿಗೆ ದೊರೆತಿದ್ದು ಎಂಬ ಮಾತು ಇದೆ. ಈ ಕಾರಣದಿಂದಲೇ  ಕೆರೆಗೆ  ದೇವಿಕೆರೆ ಎಂಬ ಹೆಸರು ಬಂದಿದೆ.
ಮುಂದೊಂದು ದಿನ ಶಿರಸಿಗೆ ಭೇಟಿ ನೀಡುವ  ಪ್ರವಾಸಿಗರು ದೇವಿಕೆರೆಯ ವೀಕ್ಷಣೆಗೆ ಬರುವಂತೆ ಆಗುವುದರಲ್ಲಿ ಎರಡು ಮಾತಿಲ್ಲ. ಆಗ ದೇವಿಕೆರೆಯ ಒಂದು ಮೂಲೆಯಲ್ಲಿ ದೇವಿಕೆರೆಯ ಇತಿಹಾಸವನ್ನು ನಮೂದಿಸಿ, ದೇವಿಕೆರೆಯ ಪ್ರಾಮುಖ್ಯತೆಯನ್ನು ಒಂದು ಫಲಕದಲ್ಲಿ ಪ್ರದರ್ಶಿಸಿದರೆ ಪ್ರವಾಸಿಗರಿಗೆ ಮಾಹಿತಿ ತಿಳಿಯುತ್ತದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button