ಪ್ರಗತಿವಾಹಿನಿ ಸುದ್ದಿ, ಶಿರಸಿ – ಜಾತ್ರೆಗೆ ಬರುವ ಭಕ್ತಾಧಿಗಳಿಗೆ ಹಾಗೂ ಪ್ರಯಾಣಿಕರಿಗೆ ಮತ್ತು ಸಾರ್ವಜನಿಕರಿಗೆ ಯಾವುದೇ ರೀತಿಯ ಅಡತಡೆಗಳು ಉಂಟಾಗದಂತೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಕೆಲವು ನಿಯಮಗಳನ್ನು ಹಾಗೂ ಸೂಚನೆಗಳನ್ನು ಅಳವಡಿಸಿದ್ದು ಭಕ್ತಾಧಿಗಳು ಸಾರ್ವಜನಿಕ ಪ್ರಯಾಣಿಕರು ಕಡ್ಡಾಯವಾಗಿ ಪಾಲಿಸತಕ್ಕದು ಎಂದು ಪೊಲೀಸರು ಸೂಚಿಸಿದ್ದಾರೆ.
* ಕುಮಟಾ – ಸಿದ್ದಾಪುರ ರಸ್ತೆಯ ಮಾರ್ಗವಾಗಿ ಬರುವಂತ ಭಕ್ತಾಧಿಗಳು ಪ್ರಯಾಣಿಕರು ಹಾಗೂ ಸಾರ್ವಜನಿಕರು ನಿಲೇಕಣಿ, ಅಲೇಖಾ ಗೇಟ್, ರಾಯರಪೇಟೆ , ಮಾರ್ಗವಾಗಿ ಬಂದು, ಭಕ್ತಾಧಿಗಳು ವಿರಭದ್ರಗಲ್ಲಿಯ ಕರ್ಜಗಿ ಕಲ್ಯಾಣ ಮಂಟಪದ ಹತ್ತಿರ ಇಳಿಸಿ ಮುಂದೆ ಶಂಕರ ಹೊಂಡ, ವಿಜಯನಗರ ಮಿಜಗರ ಪ್ಲಾಟ್ ಹಾಗೂ ಪ್ರೂಗ್ರೇಸಿವ್ ಕಾಲೇಜಿನ ಮೈದಾನದಲ್ಲಿ ಪಾರ್ಕಿಂಗ್ ಸ್ಥಳಗಳಿಗೆ ಹೋಗುವುದು, ಪಾರ್ಕಿಂಗ್ ಸ್ಥಳದಲ್ಲಿ ಕುಡಿಯುವ ನೀರು, ಮೊಬೈಲ್ ಟಾಯ್ಲೆಟ್, ವಿದ್ಯುತ ದೀಪದ ವ್ಯವಸ್ಥೆ ಮಾಡಲಾಗಿದೆ.
* ಪಾರ್ಕಿಂಗ್ ಸ್ಥಳದಿಂದ ನಿರ್ಗಮಿಸುವಂತಹ ವಾಹನಗಳು ಪ್ರಯಾಣಿಕರನ್ನು, ಭಕ್ತಾಧಿಗಳನ್ನು, ಸಾರ್ವಜನಿಕರನ್ನು ಹತ್ತಿಸಿಕೂಳ್ಳಲು ದೈವಜ್ಞ ಕಲ್ಯಾಣ ಮಂಟಪ, ಅಗಸೆಬಾಗಿಲು ಚರ್ಚ್ ಕ್ರಾಸ್ ದಿಂದ ಅಲೇಖಾ ಗೇಟ್, ರಾಯರಪೇಟೆ ಮೂಲಕ ಏಕಮುಖವಾಗಿ ಸಂಚಾರ ಮಾಡಿ ವಿರಭದ್ರಗಲ್ಲಿಯ ಕರ್ಜಗಿ ಕಲ್ಯಾಣ ಮಂಟಪದ ಸ್ಥಳಕ್ಕೆ ಬರುವುದು.
* ಈ ಮಾರ್ಗವು ಅಲೇಖಾ ಗೇಟ್ನಿಂದ ರಾಯರಪೇಟೆ, ವೀರಭದ್ರಗಲ್ಲಿ ಪಾರ್ಕೀಂಗ್ ಸ್ಥಳದ ವರೆಗೆ ಏಕಮುಖ ಸಂಚಾರವಾಗಿದೆ.(ವೀರಭದ್ರಗಲ್ಲಿ ಯ ಕರ್ಜಗಿ ಕಲ್ಯಾಣ ಮಂಟಪದ ಸ್ಥಳವು ಪ್ರಯಾಣಿಕರಿಗೆ ಸಾರ್ವಜನಿಕರಿಗೆ, ಭಕ್ತಾಧಿಗಳಿಗೆ ಹತ್ತುವ ಇಳಿಯುವ ಸ್ಥಳವಾಗಿದೆ).
* ಯಲ್ಲಾಪುರ, ಮುಂಡಗೋಡ, ಹಾವೇರಿ ಕಡೆಯಿಂದ/ಮಾರ್ಗದಿಂದ ಬರುವಂತಹ ಭಕ್ತಾಧಿಗಳು, ಸಾರ್ವಜನಿಕರ ಪ್ರಯಾಣಿಕರ ವಾಹನಗಳಿಗೆ ಮಾರಿಕಾಂಬಾ ಕಾಲೇಜ ಮೈದಾನ, ಟಿಎಸ್ಎಸ್ ಹಾಸ್ಟೇಲ ಮೈದಾನ, ಯೋಗ ಮಂದಿರ (ಮರಾಠಿಕೂಪ್ಪ)ದ ಆವರಣದಲ್ಲಿ ನಾಲ್ಕು ಚಕ್ರದ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ, ಇದೇ ರೀತಿ ದ್ವಿ ಚಕ್ರ ವಾಹನಗಳಿಗೆ ದೇವಿಕೆರೆಯ ‘ಸರೋಜಾ ಫಾರ್ಮಸ್ ಪಕ್ಕದ ಆವರಣದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ,
* ಬವಾಸಿ ಮಾರ್ಗವಾಗಿ ಬರುವಂತಹ ಪ್ರಯಾಣಿಕರ, ಸಾರ್ವಜನಿಕರ ಹಾಗೂ ಭಕ್ತಾಧಿಗಳ ವಾಹನಗಳ ಪಾರ್ಕಿಂಗ್ ಗಾಗಿ ಶಿರಸಿಕರ್ ಪ್ಲಾಟ್ ಮೈದಾನದಲ್ಲಿ ವ್ಯವಸ್ಥೆಯನ್ನು ಕಲ್ಪಸಲಾಗಿದೆ.
* ಬನವಾಸಿ ಮಾರ್ಗವಾಗಿ ಬಂದು ಹುಬ್ಬಳ್ಳಿ, ಹಾವೇರಿ ಕಡೆಗೆ ಹೋಗುವಂತಹ ವಾಹನಗಳು ಶಿರಸಿಕರ್ ಕಾಲೋನಿ ಕ್ರಾಸ್, ಕರೆಗುಂಡಿ ರಸ್ತೆಯ ಮೂಲಕ ಪ್ರಯಾಣಿಸುವುದು,
* ಝೂ ಸರ್ಕಲ್ ದಿಂದ ಸಿ,ಪಿ ಬಜಾರ, ಬಾರಕೂರ ಚೌಕ, ಶ್ರದ್ದಾನಂದ ಗಲ್ಲಿಯ ಮೂಲಕ ಐದು ರಸ್ತೆಯ ಕಡೆಗೆ ಬರುವಂತಹ ವಾಹನಗಳು ಏಕಮುಖವಾಗಿ ಸಂಚರಿಸಲು ಮಾತ್ರ ಅವಕಾಶವಿರುತ್ತದೆ.
* ಜಾತ್ರೆಯಲ್ಲಿ ಮಕ್ಕಳ ಬಗ್ಗೆ ಕಾಳಜಿ ವಹಿಸುವುದಲ್ಲದೆ, ಮಕ್ಕಳು ಕಾಣೆಯಾದಲ್ಲಿ ಜಾತ್ರಾ ಸ್ಥಳದ ಬಿಡ್ಕಿ ಸರ್ಕಲ, ಶಿವಾಜಿ ಚೌಕ, ನಟರಾಜ ರಸ್ತೆ, ವಾಜಪೇಯಿ ಸರ್ಕಲ್, ಕೋಟೆಕೆರೆ ಹತ್ತಿರದ ಸ್ಥಳಗಳಲ್ಲಿ ತೆರದಿರುವಂತಹ ಮಕ್ಕಳ ಸಹಾಯವಾಣಿ ಕೇಂದ್ರಕ್ಕೆ ಸಂರ್ಪಕಿಸುವುದು, ಅಲ್ಲದೇ ಜಾತ್ರಾ ಸ್ಥಳದ ಪಂಡಿತ ಸಾರ್ವಜನಿಕ ಗ್ರಂಥಾಲಯದಲ್ಲಿ ತೆರೆದಿರುವಂತಹ ಪೊಲೀಸ್ ಕಂಟ್ರೋಲ್ ರೂಮ್ಗೆ ಸಂರ್ಪಕಿಸುವುದು.
* ಜಾತ್ರಾ ಸ್ಥಳದ ದೇವಿ ಗದ್ದುಗೆಯಿಂದ ಸುಮಾರು 1000 ಮೀಟರ್ ಸುತ್ತಮುತ್ತಲಿನ ಒಳಗೆ ಸಾರ್ವಜನಿಕರ, ಭಕ್ತಾಧಿಗಳ, ಪ್ರಯಾಣಿಕರ ವಾಹನಗಳಿಗೆ ಪ್ರವೇಶ ಕಡ್ಡಾಯವಾಗಿ ನಿರ್ಬಂಧಿಸಲಾಗಿದೆ.
*ವಯೋವೃದ್ದರಿಗೆ, ಅಂಗವಿಕಲರಿಗೆ ಶ್ರೀ ದೇವಿ ದರ್ಶನಕ್ಕೆ ವಿಶೇಷ ವಾಹನಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
* ಝೂ ಸರ್ಕಲ್ ದಿಂದ ಐದು ರಸ್ತೆ ಮಾರ್ಗವಾಗಿ ನಿಲೇಕಣಿಯ ಶ್ರೀ ಗಣಪತಿ ದೇವಸ್ಥಾನದ ವರೆಗೆ ರಸ್ತೆಯ ಎರಡು ಬದಿಗಳಲ್ಲಿ ವಾಸವಾಗಿರುವ ಶಿರಸಿ ನಗರದ ನಿವಾಸಿಗಳು ತಮ್ಮ ಸ್ವಂತ ವಾಹನಗಳನ್ನು ಹಾಗೂ ಜಾತ್ರೆಗೆ ಬರುವ ಭಕ್ತಾದಿಗಳು, ಸಾರ್ವಜನಿಕರು, ಪ್ರಯಾಣಿಕರು ಕೂಡಾ ತಮ್ಮ ವಾಹನಗಳನ್ನು ರಸ್ತೆಯ ಎರಡು ಬದಿಯಲ್ಲಿ ನಿಲ್ಲಿಸಲು/ಪಾರ್ಕಿಂಗ್ ಮಾಡುವುದನ್ನ ಕಡ್ಡಾಯವಾಗಿ ನಿಷೇಧಿಸಲಾಗಿದೆ.
* ಝೂ ಸರ್ಕಲ್ ದಿಂದ ಸಿ,ಪಿ ಬಜಾರ, ಬಾರಕೂರ ಚೌಕ, ಶ್ರದ್ದಾನಂದ ಗಲ್ಲಿ, ಐದು ರಸ್ತೆಯವರೆಗೆ ರಸ್ತೆಯ ಎರಡು ಬದಿಯಲ್ಲಿ ವಾಸವಿರುವ ಶಿರಸಿ ನಗರದ ನಿವಾಸಿಗಳಾಗಲಿ ಹಾಗೂ ಜಾತ್ರೆಗೆ ಬರುವ ಭಕ್ತಾಧಿಗಳು,ಸಾರ್ವಜನಿಕರು, ಪ್ರಯಾಣಿಕರು ತಮ್ಮ ವಾಹನಗಳನ್ನು ರಸ್ತೆಯ ಅಕ್ಕಪಕ್ಕದಲ್ಲಿ ನಿಲ್ಲಿಸಲು/ಪಾರ್ಕಿಂಗ್ ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.
* ಶ್ರೀ ಮಾರಿಕಾಂಬ ಜಾತ್ರೆಯು ಅತಿ ಹೆಚ್ಚು ಜನರಿಂದ ಕೂಡಿರುವಂತಹ ಜಾತ್ರೆ ಯಾಗಿರುವುದರಿಂದ ಸಾರ್ವಜನಿಕರು ತಮ್ಮ ಬೆಲೆಬಾಳುವ ವಸ್ತುಗಳ ಬಗ್ಗೆ ಗಮನಹರಿಸುವುದು
*ಅಲ್ಲದೆ ಮೊಬೈಲ್, ಪರ್ಸ್, ಬ್ಯಾಗ್ ಹಾಗೂ ಮಕ್ಕಳ ಬಗ್ಗೆ ಕೂಡ ಕಾಳಜಿ ವಹಿಸುವುದು.
* ಜಾತ್ರೆಯಲ್ಲಿ ಕಿಸೆಗಳ್ಳರು, ಮೊಬೈಲ್ ಕಳ್ಳರು ,ಕಿಡಗೇಡಿಗಳು ಹಾಗೂ ಚೈನ್ ಸ್ನಾಚರ್ಸ್ ಇರುತ್ತಾರೆ. ಇವರಿಂದ ತಾವು ಜಾಗರೂಕರಾಗಿರಬೇಕು.
* ಸಾರ್ವಜನಿಕರಲ್ಲಿ ಭಕ್ತಾದಿಗಳಲ್ಲಿ ಹಾಗೂ ಜಾತ್ರೆಗೆ ಬರುವ ಪ್ರಯಾಣಿಕರಲ್ಲಿ ಸಿರ್ಸಿ ನಗರ ಪೊಲೀಸರಿಂದ ವಿನಂತಿಯೇನೆಂದರೆ ದಯಮಾಡಿ ತಮ್ಮ ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸದೆ ಸರಿಯಾದ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಿರುವಲ್ಲಿ ನಿಲ್ಲಿಸಬೇಕಾಗಿ ಈ ಮೂಲಕ ತಮ್ಮಲ್ಲಿ ಕೇಳಿಕೊಳ್ಳುತ್ತೇವೆ, ಒಂದು ವೇಳೆ ತಾವುಗಳು ಈ ನಿಯಮಗಳನ್ನು, ಸೂಚನೆಗಳನ್ನು ಪಾಲಿಸದಿದ್ದಲ್ಲಿ ದಂಡವನ್ನು ವಿಧಿಸಲಾಗುವುದು. ಒಟ್ಟಿನಲ್ಲಿ ಸಾರ್ವಜನಿಕರು ಹಾಗೂ ನಾವೆಲ್ಲರೂ ಸೇರಿ ಸಿರ್ಸಿ ಮಾರಿಕಾಂಬಾ ಜಾತ್ರೆಯನ್ನು ಯಶಸ್ವಿಗೊಳಿಸೋಣ. ನಮ್ಮೊಂದಿಗೆ ಕೈ ಜೋಡಿಸಿ.
– ಇದು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಪ್ರಕಟಣೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ