ವಿಭಾಗೀಯ ಮಟ್ಟದ ಪಂದ್ಯಾವಳಿಯಲ್ಲಿ ಶಿರಸಿ ತಂಡ ರನ್ನರ್ ಅಪ್

ಪ್ರಗತಿವಾಹಿನಿ ಸುದ್ದಿ, ಶಿರಸಿ-: ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ರಾಯಭಾಗ ತಾಲೂಕಿನ ಅಳಗವಾಡಿಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರೌಢ ಶಾಲೆಯಲ್ಲಿ ಗುರುವಾರ ನಡೆದ ವಿಭಾಗೀಯ ಮಟ್ಟದ ಥ್ರೋ ಬಾಲ್ ಪಂದ್ಯಾವಳಿಯಲ್ಲಿ ಶಿರಸಿಯ ಸೆಂಟ್ ಅಂಥೋನಿ ಇಂಗ್ಲೀಷ್ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ರನ್ನರ್ ಅಪ್ ಪ್ರಶಸ್ತಿ ಗಳಿಸಿದೆ.
ಪಂದ್ಯಾವಳಿಯಲ್ಲಿ ಹಾವೇರಿ ಹಾಗೂ ಬಾಗಲಕೋಟ ಜಿಲ್ಲೆಯ ತಂಡಗಳನ್ನು ಸೋಲಿಸಿದ ಶಿರಸಿಯ ಸೆಂಟ್ ಅಂಥೋನಿ ಇಂಗ್ಲೀಷ್ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ತಂಡ ಅಂತಿಮ ಸುತ್ತಿಗೆ ಪ್ರವೇಶಿಸಿತ್ತು. ಅಂತಿಮ ಸುತ್ತಿನ ಪಂದ್ಯದಲ್ಲಿ ಚಿಕ್ಕೋಡಿ ತಂಡದ ಎದುರು ಸೋಲುವ ಮೂಲಕ ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡಿತು.
ಶಿರಸಿಯ ಸೆಂಟ್ ಅಂಥೋನಿ ಶಾಲೆಯ ಥ್ರೋ ಬಾಲ್ ತಂಡದಲ್ಲಿ ಅಭಿರೂಪ ನಾಯ್ಕ, ವಶಿಷ್ಠ ಹೆಗಡೆ, ಪ್ರೇಮ ವೈದ್ಯ, ಕಾಮಿಲ್ ಭರತನಹಳ್ಳಿ, ಅಬ್ದುಲ್ ಖಾದರ್, ವಿಶಾಲ ಮಶಾಲ್ದಿ, ಕಾರ್ತಿಕ ಶೆಟ್ಟಿ, ರಿಷಿ ಮೂಳೆ, ಅಖಿಲ ಮುರ್ಡೆಶ್ವರ, ಆದಿತ್ಯ ವಾರೇಕರ, ಶ್ರೀವಾಸ್ತ ಶೆಟ್ಟಿ, ಜುಬಿನ್ ಸೈಯದ್ ಇದ್ದರು.
ವಿದ್ಯಾರ್ಥಿಗಳ ಸಾಧನೆಗೆ ಶಾಲೆಯ ಮುಖ್ಯ ಶಿಕ್ಷಕಿ ಲವಿತಾ ನರೋನ್ಹಾ, ದೈಹಿಕ ಶಿಕ್ಷಣ ಶಿಕ್ಷಕ ಗಫಾರ್ ಹಾಗೂ ಶಿಕ್ಷಕರು ಮತ್ತು ಪಾಲಕರು ಸಂತಸ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸಿದ್ದ ಈ ಪಂದ್ಯಾವಳಿಯಲ್ಲಿ 9 ಜಿಲ್ಲೆಗಳು ಭಾಗವಹಿಸಿದ್ದವು.ಶಾಲೆಯ ಐವರು ವಿದ್ಯಾರ್ಥಿಗಳು ಮಂಡ್ಯದಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button