Kannada NewsKarnataka NewsLatest

*ಸರಣಿ ಅಪಘಾತ; ಅಂಗಡಿಯೊಳಗೆ ನುಗ್ಗಿದ ಬೊಲೆರೊ ವಾಹನ*

ಪ್ರಗತಿವಾಹಿನಿ ಸುದ್ದಿ; ಶಿರಸಿ: ಬಸ್, ಬೋಲರ್ ಹಾಗೂ ಓಮ್ಮಿ ನಡುವೆ ಸರಣಿ ಅಪಘಾತ ಸಂಭವಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲುಕಿನ ಬಿಸಲಕೊಪ್ಪದಲ್ಲಿ ನಡೆದಿದೆ.

ಮಳಗಿಯಿಂದ ಶಿರಸಿಗೆ ತೆರಳುತ್ತಿದ್ದ ಓಮಿನಿ-ಬೋಲೆರೋ ವಾಹನ ಹಾಗೂ ಶಿರಸಿಯಿಂದ ಹಾವೇರಿಗೆ ಚಲಿಸುತ್ತಿದ್ದ ಬಸ್ ಗಳ ನಡುವೆ ಡಿಕ್ಕಿ ಸಂಭವಿಸಿದೆ. ಅಪಘಾತದ ರಭಸಕ್ಕೆ ಬೊಲೆರೊ ವಾಹನ ಅಂಗಡಿಯೊಳಗೆ ನುಗ್ಗಿದೆ. ಹಲವರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ

ಗಾಯಾಳುಗಳನ್ನು ಬಿಸಲಕೊಪ್ಪದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. ಅಪಘಾತ ಸ್ಥಳಕ್ಕೆ ಶಿರಸಿ ಗ್ರಾಮಿಣ ಠಾಣೆಯ ಪೊಲೀಸರು ಭೇಟಿ ನೀಡಿದ್ದಾರೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button