ಪ್ರಗತಿವಾಹಿನಿ ಸುದ್ದಿ; ಶಿರಸಿ: ಮಾಜಿ ಅಬಕಾರಿ ಸಚಿವರು, ಹಿರಿಯ ಜನತಾ ಪಾರ್ಟಿಯ ಮುಖಂಡರಾಗಿದ್ದ ಪ್ರೇಮಾನಂದ ಜೈವಂತ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅವರಿಗೆ 74ವರ್ಷ ವಯಸ್ಸಾಗಿತ್ತು.
1994ರಲ್ಲಿ ಮೊದಲ ಬಾರಿಗೆ ಶಾಸಕರಾಗಿದ್ದ ಅವರು, ಜೆ.ಹೆಚ್ ಪಟೇಲರ ಸಚಿವ ಸಂಪುಟದಲ್ಲಿ ಅಬಕಾರಿ ಸಚಿವರಾಗಿದ್ದರು. 1999ರಲ್ಲಿ ವಿವೇಕಾನಂದ ವೈದ್ಯರೆದುರು ಪಕ್ಷೇತರರಾಗಿ ಸ್ಪರ್ಧಿಸಿ ಸೋಲನ್ನು ಕಂಡಿದ್ದರು. ಪ್ರೇಮಾನಂದ ಜೈವಂತರ ನಿಧನಕ್ಕೆ ಗಣ್ಯರು ಶೋಕ ವ್ಯಕ್ತಪಡಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ