Latest

ಶಿರಸಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಸೋರಿಕೆ

ಪ್ರಗತಿವಾಹಿನಿ ಸುದ್ದಿ; ಶಿರಸಿ: ಮತ್ತೊಂದು ಆಕ್ಸಿಜನ್ ಮಹಾದುರಂತವೊಂದು ಸ್ವಲ್ಪದರಲ್ಲಿ ತಪ್ಪಿದೆ. ತಾಲೂಕು ಆಸ್ಪತ್ರೆ ಆಕ್ಸಿಜನ್ ಯುನಿಟ್‌ ನಲ್ಲಿ ಆಕ್ಸಿಜನ್ ಸೋರಿಕೆಯಾದ ಘಟನೆ ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕು ಆಸ್ಪತ್ರೆಯಲ್ಲಿ ನಡೆದಿದೆ.

ರಾತ್ರಿಯಿಂದಲೇ ತಾಲೂಕು ಆಸ್ಪತ್ರೆಯಲ್ಲಿ ಆಕ್ಸಿಜನ್ ಸೋರಿಕೆಯಾಗಿ, ಕೊರೊನಾ ಸೋಂಕಿತರು ಪರದಾಡುತ್ತಿದ್ದರೂ ಆಸ್ಪತ್ರೆ ಸಿಬ್ಬಂದಿಗಳು ಗಮನಿಸಿಲ್ಲ. ಇಂದು ಮುಂಜಾನೆ ಚಿಕಿತ್ಸೆ ಪಡೆಯುತ್ತಿದ್ದ ಸೋಂಕಿತರ ತಪಾಸಣೆ ವೇಳೆ ಘಟನೆ ಬೆಳಕಿಗೆ ಬಂದಿದೆ. ತಕ್ಷಣ ಆಸ್ಪತ್ರೆ ಆಕ್ಸಿಜನ್ ಘಟದಲ್ಲಿ ಪರಿಶೀಲನೆ ನಡೆಸಿದಾಗ ಆಕ್ಸಿಜನ್ ಸೋರಿಕೆಯಾಗುತ್ತಿರುವುದು ದೃಢವಾಗಿದೆ.

Home add -Advt

ತಾಂತ್ರಿಕ ಸಿಬ್ಬಂದಿಗಳನ್ನು ಕರೆಸಿ ಆಕ್ಸಿಜನ್ ಸೋರಿಕೆ ಸರಿಪಡಿಸಲಾಗಿದೆ. ಜಿಲ್ಲೆಯಲ್ಲಿ ಸಂಭವಿಸಲಿದ್ದ ಮಹಾದುರಂತವೊಂದು ತಪ್ಪಿದೆ.
ರಾಜ್ಯದಲ್ಲೂ ಪತ್ತೆಯಾಯ್ತು ವೈಟ್ ಫಂಗಸ್

Related Articles

Back to top button