*ಕಬ್ಬಿಣದ ಕಿಡಕಿಯನ್ನು ತುಂಡರಿಸಿ ಮನೆಗೆ ನುಗ್ಗಿದ ಕಳ್ಳರು; ಚಿನ್ನಾಭರಣ, ನಗದು ದೋಚಿ ಪರಾರಿ*

ಪ್ರಗತಿವಾಹಿನಿ ಸುದ್ದಿ; ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಅಶ್ವಿನಿ ಸರ್ಕಲ್ ಬಳಿಯ ಅಯೋಧ್ಯಾ ಕಾಲೋನಿಯ ಮನೆಯೊಂದರಲ್ಲಿ ಕಳ್ಳತನ ನಡೆದಿದ್ದು, 5.28 ಲಕ್ಷ ರೂ ಬೆಲೆಯ ಬಂಗಾರದ ಆಭರಣ ಮತ್ತು ನಗದನ್ನು ದೋಚಿ ಕಳ್ಳರು ಪರಾರಿಯಾಗಿದ್ದಾರೆ.
ಆಶೀಶ್ ವಿಲಾಸ ಲೋಖಂಡೆ ಎಂಬುವವರ ಮನೆಯಲ್ಲಿ ಕಳ್ಳರು ಕೈಚಳಕ ತೋರಿದ್ದಾರೆ. ಬಂಗಾರದ ನೆಕ್ಲೇಸ್ 26 ಗ್ರಾಮ್, ಬಂಗಾರದ ಲಾಕೆಟ್, ಗೋಲ್ಡ್ ಚೈನ್ 48ಗ್ರಾಮ್, ಬೆಳ್ಳಿ ತಂಬಿಗೆ 400 ಗ್ರಾಮ್, ಆರತಿ ಸೆಟ್ 500 ಗ್ರಾಮ್, ಬೆಳ್ಳಿ ದೀಪ, ಲೋಟ, ಚಮಚ ಹಾಗೂ ನಗದು ಹಣ ಕಳುವಾಗಿದೆ.
ಕಟರ್ ಬಳಸಿ ಕೋಣೆಯ ಕಬ್ಬಿಣದ ಕಿಡಕಿನ್ನು ತುಂಡು ಮಾಡಿ ಒಳಗೆ ನುಗ್ಗಿರುವ ಕಳ್ಳರು ಬಾಗಿಲನ್ನು ಒಡೆದು ಚಿನ್ನ, ಬೆಳ್ಳಿ, ಹಣ ದೋಚಿದ್ದಾರೆ.
ಕಳ್ಳತನ ಬೇಧಿಸಲು ಕಾರವಾರದಿಂದ ಶ್ವಾನದಳ ಶಿರಸಿಗೆ ಆಗಮಿಸಿದ್ದು, ಜೊತೆಗೆ ಹುಬ್ಬಳ್ಳಿಯಿಂದ ಪೊರೆನ್ಸಿಕ್ ತಂಡ ಆಗಮಿಸಿದೆ. ಸ್ಥಳಕ್ಕೆ ಡಿವೈ ಎಸ್ಪಿ ಗಣೇಶ ಕೆ ಎಲ್, ಸಿಪಿಐ ರಾಮಚಂದ್ರ ನಾಯಕ್ ಹಾಗೂ ಪಿಎಸ್ ಐ ಮಾಲಿನಿ ಹಂಸಬಾವಿ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ