Latest

ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

ಪ್ರಗತಿವಾಹಿನಿ ಸುದ್ದಿ; ಶಿರಸಿ: ಶ್ರೀಗಂಧದ ಮರ ಅಕ್ರಮ ಸಾಗಾಣೆ ಪ್ರಕರಣದಲ್ಲಿ ಕಳೆದ 28 ವರ್ಶಗಾಳಿಂದ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಯೊಬ್ಬನನ್ನು ಉತ್ತರ ಕನ್ನಡ ಜಿಲ್ಲೆ ಶಿರಸಿ ಹೊಸ ಮಾರುಕಟ್ಟೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಪ್ರಕರಣದಲ್ಲಿ ಆರೋಪಿತರಾದ ಅನ್ವರ ಪಾಷಾ /ಗುಲಾಂ ಕುಸೂರ ಟಿಪ್ಪುನಗರ ಶಿವಮೊಗ್ಗ,ಮತ್ತು ಸಹಚರರಾದ ಅಬ್ದುಲ್ ಮಸೀದ್ ಹಾಗೂ ಗೂಡಚಾರ ದಿರೇಂದ್ರಚಾರ್ಯ ಸಾ//ಶಿವಮೊಗ್ಗ ಸೇರಿಕೊಂಡು ಅಂದಾಜು 29,580/- ರೂ ಮೌಲ್ಯದ 15 kg ಶ್ರೀಗಂಧದ ಮರದ ತುಂಡುಗಳನ್ನು ಗೋಣಿಚೀಲದಲ್ಲಿ ತುಂಬಿಕೊಂಡು ಕಳ್ಳತನದಿಂದ ಸಾಗಿಸುತ್ತಿರುವಾಗ ಸಿಕ್ಕಿಬಿದ್ದಿದ್ದರು. ಆದರೆ ಪ್ರಮುಖ ಆರೋಪಿಯಾದ ಅನ್ವರ್ ಪಾಶಾ ತಂದೆ ಗುಲಾಂ ಕುಸೂರು ಟಿಪ್ಪುನಗರ ಶಿವಮೊಗ್ಗ ಈತ ತಲೆಮರೆಸಿಕೊಂಡಿದ್ದ.

ಇದೀಗ ಆರೋಪಿಯನ್ನು ಬಂಧಿಸಿರುವ ಹೊಸ ಮಾರುಕಟ್ಟೆ ಠಾಣೆ ಪೊಲೀಸರು, ಐಪಿಸಿ ಸೆಕ್ಷನ್ 379, 411 ಸಹಿತ 86,87,KF act ನಡಿಯಲ್ಲಿ ಪ್ರಕರಣ ದಾಖಲಿಸಿ, ಜೆ.ಎಂ.ಏಫ್.ಸಿ ಶಿರಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶಿವಪ್ರಕಾಶ ದೇವರಾಜು, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎಸ್.ಬದರಿನಾಥ, ಶಿರಸಿ ಉಪವಿಭಾಗದ ಡಿಎಸ್ ಪಿ ರವಿ ಡಿ ನಾಯ್ಕ ಹಾಗೂ ವೃತ್ತ ನಿರೀಕ್ಷಕರಾದ ಪ್ರದೀಪ್ ಬಿಯು ರವರ ಮಾರ್ಗದರ್ಶನದಲ್ಲಿ ಶಿರಸಿ ಹೊಸ ಮಾರುಕಟ್ಟೆ ಠಾಣೆಯ ಪಿಎಸ್ಐ ನಾಗಪ್ಪ ನೇತೃತ್ವದ ಎಎಸ್ಐ ಸುಭಾಷ ನಾಯ್ಕ, ಸಿಬ್ಬಂದಿಗಳಾದ ರಮೇಶಗೌಡ, ಹನಮಂತ ಮಾಕಾಪುರ, ರಾಘವೇಂದ್ರ ಅಂತೋಣಿ ರವರನ್ನೊಳಗೊಂಡ ತಂಡ ಆರೋಪಿತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶಿವಪ್ರಕಾಶ ದೇವರಾಜುರವರು ಪ್ರಶಂಸೆ ವ್ಯಕ್ತಪಡಿಸಿ ಬಹುಮಾನ ಘೋಷಿಸಿದ್ದಾರೆ.
ಬರೋಬ್ಬರಿ 4 ಕೋಟಿ ರೂಪಾಯಿಯೊಂದಿಗೆ ಎಸ್ಕೇಪ್ ಆದ ಭದ್ರತಾ ಸಿಬ್ಬಂದಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button