Latest

ಸಿಬಿಐ ಅಧಿಕಾರಿಗಳ ಹೆಸರಿನಲ್ಲಿ ನಡೆಯಿತು ಸಿನಿಮಾ ರೀತಿಯ ದರೋಡೆ

ಪ್ರಗತಿವಾಹಿನಿ ಸುದ್ದಿ: ಕೋಲಾರ; ನಗರದ ಸಿ.ಬೈರೇಗೌಡ ಬಡಾವಣೆಯಲ್ಲಿ ಸಾರ್ವಜನಿಕರು ಬೆಚ್ವಿ ಬೀಳಿಸುವಂತ ದರೋಡೆ ಪ್ರಕರಣ ನಡೆದಿದೆ. ಬಡಾವಣೆಯ 2 ನೇ ಕ್ರಾಸ್ ಮುಖ್ಯ ರಸ್ತೆಯಲ್ಲಿರೊ ಮೂರಂತಸ್ತಿನ ರಮೇಶ್ ರ ಮನೆಗೆ, ನೆನ್ನೆ ರಾತ್ರಿ 8 ರ ಗಂಟೆ ವೇಳೆಗೆ ನುಗ್ಗಿದ ಮೂವರು ದರೋಡೆಕೋರರು ಸಿನಿಮಾ ರೀತಿಯಲ್ಲಿ ಉಪಾಯವಾಗಿ ಹಣದೋಚಿದ್ದಾರೆ.

ಇಲ್ಲಿನ ಉದ್ಯಮಿ ರಮೇಶ್  ಎನ್ನುವರ ಮನೆಗೆ ಸಿ.ಬಿ.ಐ ಅಧಿಕಾರಿಗಳೆಂದು ಹೇಳಿ ಯಾಮಾರಿಸಿದ ದರೋಡೆಕೋರರು, ಉದ್ಯಮಿ ಮನೆಗೆ ನುಗ್ಗಿ, ಸಿನಿಮಾ ರೀತಿಯಲ್ಲಿ ಲಕ್ಷಾಂತರ ರೂಪಾಯಿ ದೋಚಿ ಪರಾರಿಯಾಗಿದ್ದಾರೆ.

ತಾವು ಸಿ.ಬಿ.ಐ ಅಧಿಕಾರಿಗಳು, ನಿಮ್ಮ ಸಹಿ ಬೇಕು, ಬಾಗಿಲು ತೆಗೆಯಿರಿ ಎಂದು ಹಿಂದಿಯಲ್ಲಿ  ಕೇಳಿದ್ದಾರೆ. ಅನುಮಾನಗೊಂಡ ರಮೇಶ್ ಪತ್ನಿ, ಪ್ರಶ್ನೆಗಳನ್ನು ಕೇಳುತ್ತಿರುವಾಗ ಮನೆಯೊಳಕ್ಕೆ ನುಗ್ಗಿದ ಮೂವರು, ರಮೇಶ್,  ಪತ್ನಿ ಮತ್ತು ಪುತ್ರನನ್ನ ರೂಮ್‍ನೊಳಗೆ ಕೂಡಿಹಾಕಿ ಹಣ ದೋಚಿದ್ದಾರೆ.

ಮನೆಯವರಿಗೆ ಗನ್  ಹಾಗೂ ಮಾರಕಾಸ್ತ್ರಗಳನ್ನ ತೋರಿಸಿ ಮನೆಯಲ್ಲಿದ್ದ 25 ಲಕ್ಷ ಹಣ, ಒಂದು ಕೆಜಿಗು ಅಧಿಕ ಚಿನ್ನ, ಬೆಳ್ಳಿ ವಸ್ತುಗಳನ್ನ ಕದ್ದೊಯ್ದಿದ್ದಾರೆ.

Home add -Advt

ಮನೆಗೆ ಅಳವಡಿಸಿದ್ದ ಸಿಸಿ ಟಿವಿ ದೃಶ್ಯಗಳ ಡಿ.ವಿ‌.ಆರ್ ನಾಶ ಪಡಿಸಿದ ದುಷ್ಕರ್ಮಿಗಳು, ಅದನ್ನು ಬಿಡದೆ ತೆಗೆದುಕೊಂಡು ಹೋಗಿದ್ದಾರೆ.

ಮಾಲೀಕ ರಮೇಶ್, ಜೋರಾಗಿ ಕಿರುಚಾಡಿದ ನಂತರ ಸ್ಥಳಕ್ಕೆ ನೆರೆಹೊರೆಯ ಜನರು ಆಗಮಿಸಿ ಬಳಿಕ ಪೊಲೀಸ್ ಠಾಣೆಗೆ  ಮಾಹಿತಿ ನೀಡಿದ್ದಾರೆ. ಕೋಲಾರ ನಗರ ಪೊಲೀಸರು ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ್ದು ಪರಿಶೀಲನೆ ನಡೆಯುತ್ತಿದೆ.
ಮೂವರು ಪುತ್ರಿಯರಿಗೆ ಗುಂಡಿಟ್ಟು ಬಳಿಕ ತಾನೇ ಶೂಟ್ ಮಾಡಿಕೊಂಡು ಮೃತಪಟ್ಟ ತಂದೆ

Related Articles

Back to top button