Kannada NewsKarnataka NewsLatest

*ಸಿಲಿಂಡರ್ ಸ್ಫೋಟ: 6 ಜನರ ಸ್ಥಿತಿ ಗಂಭೀರ*

ಪ್ರಗತಿವಾಹಿನಿ ಸುದ್ದಿ: ಬೆಳ್ಳಂ ಬೆಳಿಗ್ಗೆ ಸಿಲಿಂಡರ್ ಸ್ಫೋಟಗೊಂಡು 6 ಜನರು ಗಂಭೀರವಾಗಿ ಗಯಗೊಂದಿರುವ ಘಟನೆ ಬೆಂಗಳೂರಿನ ಯಲಹಂಕದಲ್ಲಿ ನಡೆದಿದೆ.

ಯಲಹಂಕದ ಎಲ್ ಬಿ ಎಸ್ ಲೇಔಟ್ ನಲ್ಲಿ ಈ ಅವಘಡ ಸಂಭವಿಸಿದ್ದು, ಸ್ಫೋಟದ ತೀವ್ರತೆಗೆ ಮನೆಯ ಮೇಲ್ಛಾವಣಿ ಛಿದ್ರ ಛಿದ್ರಗೊಂಡಿದೆ. ಐದು ಮನೆಗಳಿಗೆ ಹಾನಿಯಾಗಿದೆ.

Home add -Advt

ಘಟನೆಯಲ್ಲಿ 6 ಜನರು ಗಾಯಗೊಂಡಿದ್ದಾರೆ. ಅವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಎಲ್ಲಾ ಗಾಯಾಳುಗಳನ್ನು ಯಲಹಂಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಿಲಿಂದರ್ ಸ್ಫೋಟಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಎರಡು ಮೂರು ಮನೆಗಳ ಗೋಡೆಕುಸಿದುಬಿದ್ದಿವೆ. ಇನ್ನೂ ಎರಡು ಮನೆಗಳ ಗೋಡೆ ಸಂಪೂರ್ಣ ಬಿರುಕುಬಿಟ್ಟಿವೆ.


Related Articles

Back to top button